







ಪುತ್ತೂರು: ನೆ.ಮುಡ್ನೂರು ಗ್ರಾಮದ ಸುರುಳಿಮೂಲೆ ಎಂಬಲ್ಲಿ ಗೂಡಂಗಡಿಗೆ ನುಗ್ಗಿದ ಕಳ್ಳರು ಕಳ್ಳತನ ನಡೆಸಿದ ಘಟನೆ ನಡೆದಿದೆ.


ಸುರುಳಿಮೂಲೆ ಶಾಲಾ ಬಳಿಯಿರುವ ಎಂ.ಎ ಅಬ್ದುಲ್ ಖಾದರ್ ಎಂಬವರಿಗೆ ಸೇರಿದ ಗೂಡಂಗಡಿಯ ಬೀಗ ಮುರಿದ ಕಳ್ಳರು ಗೂಡಂಗಡಿಯಲ್ಲಿ ಸಾಮಾನುಗಳನ್ನು ಹಾಗೂ ಚಿಲ್ಲರೆ ಹಣವನ್ನು ಕಳ್ಳತನ ನಡೆಸಿದ್ದು ಅಂದಾಜು 20 ಸಾವಿರ ನಷ್ಟ ಸಂಭವಿಸಿರುವುದಾಗಿ ತಿಳಿದು ಬಂದಿದೆ.



ಎಂ.ಎ ಅಬ್ದುಲ್ ಖಾದರ್ ಅವರು ಡಿ.30ರಂದು ಬೆಳಿಗ್ಗೆ ಎಂದಿನಂತೆ ಅಂಗಡಿಗೆ ಬಂದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಅವರು ಈಶ್ವರಮಂಗಲ ಪೊಲೀಸ್ ಹೊರಠಾಣೆಗೆ ದೂರು ನೀಡಿದ್ದಾರೆ.










