







ಪುತ್ತೂರು: ಬೀರಮಲೆ ನಿವಾಸಿ ಗಿರಿಜಾ ಲಿಂಗಪ್ಪ (92ವ.) ಆಚಾರ್ಯರವರ ಶ್ರದ್ದಾಂಜಲಿ ಕಾರ್ಯಕ್ರಮವು ಪುತ್ತೂರು ಬಪ್ಪಳಿಗೆ ಜೈನ ಭವನದಲ್ಲಿ ಜ.01 ರಂದು ನಡೆಯಿತು.


ನಲ್ಕ ಗೋಪಾಲಕೃಷ್ಣ ಆಚಾರ್ಯ, ಬೀರಮಲೆ ವಿಶ್ವಕರ್ಮ ಮಂದಿರದ ಅಧ್ಯಕ್ಷರಾದ ಒಡ್ಯ ಗಂಗಾಧರ ಆಚಾರ್ಯ, ಬಂಗ್ರ ಮಂಜೇಶ್ವರ ಕಾಳಿಕ ಪರಮೇಶ್ವರಿ ದೇವಸ್ಥಾನದ ಪುತ್ತೂರು ಪ್ರಾಂತ್ಯದ ಮೊಕ್ತೇಸರರಾದ ಬೀರಮಲೆ ಹರೀಶ ಆಚಾರ್ಯರು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಗಿರಿಜಾ ಲಿಂಗಪ್ಪ ಆಚಾರ್ಯರ ಪುತ್ರರಾದ ಎಂ. ಗೋಪಾಲ ಕೃಷ್ಣ ಆಚಾರ್ಯ, ಎಂ. ಭವಾನಿಶಂಕರ ಆಚಾರ್ಯ, ಎಂ. ಉಮೇಶ ಆಚಾರ್ಯ, ಎಂ. ಭಾಸ್ಕರ ಆಚಾರ್ಯ, ಎಂ. ಸದಾಶಿವ ಆಚಾರ್ಯ, ಪುತ್ರಿಯರಾದ ರೇವತಿ, ಚಂದ್ರಾವತಿ, ಪುಷ್ಪಾವತಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಹಾಗೂ ಊರಿನ ಗಣ್ಯರು, ಬಂಧು ಮಿತ್ರರು ಉಪಸ್ಥಿತರಿದ್ದರು.













