ಈಶ್ವರಮಂಗಲ: ಪ್ಲಾಸ್ಟೋ ಪ್ಲಾನೆಟ್ ಶುಭಾರಂಭ

0

ಪುತ್ತೂರು: ಈಶ್ವರಮಂಗಲ ಶ್ರೀ ಗಣೇಶ್ ಕಾಂಪ್ಲೆಕ್ಸ್‌ನಲ್ಲಿ ಪ್ಲಾಸ್ಟಿಕ್ ಐಟಂಗಳ ಮಾರಾಟ ಮಳಿಗೆ ಪ್ಲಾಸ್ಟೋ ಪ್ಲಾನೆಟ್ ಜ.2ರಂದು ಶುಭಾರಂಭಗೊಂಡಿತು.

ಪ್ರಗತಿಪರ ಕೃಷಿಕ ಶ್ರೀಕೃಷ್ಣ ಭಟ್ ಮುಂಡ್ಯ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಬೆಳಿಗ್ಗೆ ವೈದಿಕ ಕಾರ್ಯಕ್ರಮವನ್ನು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕ ರವೀಂದ್ರ ಮಣಿಲತ್ತಾಯ ನೆರವೇರಿಸಿದರು. ಈ ಸಂದರ್ಭದಲ್ಲಿ ನೆ.ಮುಡ್ನೂರು ಗ್ರಾ.ಪಂ ಸದಸ್ಯ ರಮೇಶ್ ರೈ ಸಾಂತ್ಯ, ಅಮ್ಮು ಪೂಂಜ ಪಳನೀರು, ನಾರಾಯಣ ರೈ ನೆಲ್ಲಿತ್ತಡ್ಕ, ಶ್ರೀಗಣೇಶ್ ಕಾಂಪ್ಲೆಕ್ಸ್‌ನ ಮಾಲಕ ಗಣೇಶ್ ರೈ ಮುಳಿಪಡ್ಪು, ಅಜಿತ್ ರೈ ಮುಳಿಪಡ್ಪು, ಸಂತೋಷ್ ರೈ ಮುಳಿಪಡ್ಪು, ಉಮಾವತಿ, ಅಕ್ಷಯ್, ಆರುಶ್ ಶೆಟ್ಟಿ, ಪ್ರೀತಂ ರೈ, ರಘುನಾಥ ರೈ ಪಳನೀರು, ದೀಕ್ಷಿತ್ ಡೆಂಬಾಳೆ, ಪೂರ್ಣಚಂದ್ರ ರೈ ನೆಲ್ಲಿತ್ತಡ್ಕ, ನಾರಾಯಣ ಶೆಟ್ಟಿ ಕಾಸರಗೋಡು, ಮಧುಕರ ರೈ ನೆಲ್ಲಿತ್ತಡ್ಕ, ಹಾಗೂ ಅನೇಕ ಗಣ್ಯರು ಆಗಮಿಸಿ ನೂತನ ಸಂಸ್ಥೆಗೆ ಶುಭಹಾರೈಸಿದರು.

ಪ್ಲಾಸ್ಟೋ ಪ್ಲಾನೆಟ್‌ನ ಮಾಲಕ ಚಂದ್ರಹಾಸ ಶೆಟ್ಟಿ, ಅಕ್ಷತ್ ಸ್ವಾಗತಿಸಿ ನಮ್ಮಲ್ಲಿ 100 ರೂ. ನಿಂದ 199ರೂ.ವರೆಗೆ ವಿವಿಧ ರೀತಿಯ ಗೃಹೋಪಯೋಗಿ ಪ್ಲಾಸ್ಟಿಕ್ ಐಟಂಗಳು ಲಭ್ಯವಿದೆ. ಇದರ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳುವಂತೆ ವಿನಂತಿಸಿದರು.

LEAVE A REPLY

Please enter your comment!
Please enter your name here