ಅಮ್ಮುಂಜ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ, ಶ್ರೀ ಧರ್ಮದೈವಗಳ ನೇಮೋತ್ಸವ ಸಂಪನ್ನ

0

ಪುತ್ತೂರು: ಕುರಿಯ ಗ್ರಾಮದ ಅಮ್ಮುಂಜ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.3 ಹಾಗೂ 4ರಂದು ಶ್ರೀ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೋತ್ಸವ ಮತ್ತು ಶ್ರೀ ಧರ್ಮದೈವಗಳ ನೇಮೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಜರಗಿದ್ದು ಯಶಸ್ವಿ ಸಂಪನ್ನ ಕಂಡಿದೆ.

ಜ.4 ರಂದು ಬೆಳಿಗ್ಗೆ ತಿಂಗಳ ಬಲಿವಾಡು ಕೂಟ, ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ದೈವಗಳ ಭಂಡಾರ ತೆಗೆಯುವುದು, ದುರ್ಗಾ ಪೂಜೆ, ಕಾರ್ತಿಕ ಪೂಜೆ, ಅನ್ನಸಂತರ್ಪಣೆ, ರಾತ್ರಿ ಧರ್ಮದೈವಗಳ ನೇಮೋತ್ಸವ ಜರಗಿತು.

ಸಹಕರಿಸಿದ ಸಂಘ-ಸಂಸ್ಥೆಗಳು:
ಶ್ರೀ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಮ್ಮುಂಜ ಪಾಲಿಂಜೆ ಶ್ರೀ ಮಹಾವಿಷ್ಣು ಮೂರ್ತಿ ನವೋದಯ ಸ್ವ-ಸಹಾಯ ಗುಂಪು, ಅಮ್ಮುಂಜ ಪಾಲಿಂಜೆ ಶ್ರೀ ಶನೀಶ್ವರ ಪೂಜಾ ಸಮಿತಿ, ಅಮ್ಮುಂಜ ಪಾಲಿಂಜೆ ಶ್ರೀ ತುಳಸಿ ನವೋದಯ ಸ್ವ-ಸಹಾಯ ಗುಂಪು, ಅಮ್ಮುಂಜ ಪಾಲಿಂಜೆ ಶ್ರೀ ಸರಸ್ವತಿ ನವೋದಯ ಸ್ವ-ಸಹಾಯ ಗುಂಪು, ಅಮ್ಮುಂಜ ಪಾಲಿಂಜೆ ಶ್ರೀ ಮೈತ್ರೇಯಿ ಸ್ವ-ಸಹಾಯ ಗುಂಪು, ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿ, ಪಾಲಿಂಜೆ ಶ್ರೀ ವಿಷ್ಣುಸಂಜೀವಿನಿ ಸಂಘ, ಪಂಜಳ ಜೈಶ್ರೀರಾಮ್ ಗೆಳೆಯರ ಬಳಗ, ಅಮ್ಮುಂಜ ಪಾಲಿಂಜೆ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ, ಪಂಜಳ ಶ್ರೀ ಷಣ್ಮುಖ ಗೆಳೆಯರ ಬಳಗ ಸಹಕರಿಸಿರುತ್ತಾರೆ.

ಈ ಸಂದರ್ಭದಲ್ಲಿ ಅಮ್ಮುಂಜ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವಜಿತ್ ಪೂಜಾರಿ ಅಮ್ಮುಂಜ, ಸದಸ್ಯರಾದ ನಿರಂಜನ್ ಶೆಟ್ಟಿ, ಹೊನ್ನಪ್ಪ ನಾಯ್ಕ, ರಮೇಶ್ ಭಟ್ ಅಂಗಿತ್ತಾಯ, ನಾರಾಯಣ ಮಣಿಯಾಣಿ, ಗುರುಪ್ರಸಾದ್ ಮಾದೇರಿ, ನಳಿನಿ ಸುಧಾಕರ್, ಅರ್ಚಕ ಶ್ರವಣ್ ಭಟ್ ಸಹಿತ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here