ಮೂಡಬಿದಿರೆಯಲ್ಲಿ ಆಟೋ ಎಕ್ಸ್-2026 : ಕಾರು ಮತ್ತು ಬೈಕ್ ಆಟೋಕ್ರಾಸ್ ರ‍್ಯಾಲಿ

0

ಪುತ್ತೂರು: ಮೂಡಬಿದಿರೆಯ ಪ್ರಾರ್ಥನಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಕಾರು ಮತ್ತು ಬೈಕ್ ಆಟೋಕ್ರಾಸ್ ರ‍್ಯಾಲಿಯಲ್ಲಿ ಬೊಳುವಾರು ಎನ್ ಫೀಲ್ಡ್ ಶೋ.ರೂಂನ ಏಸ್ ಮೊಬೈಕ್ಸ್ ನ ಮ್ಹಾಲಕ ಆಕಾಶ್ ಐತಾಳ್‌ ಚಾಂಪಿಯನ್ ನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.


ಕರಾವಳಿಯ ಅತೀ ದೊಡ್ಡ ಮೋಟಾರ್ ಸ್ಪೋರ್ಟ್ ಈವೆಂಟ್ ಇದಾಗಿದ್ದು, ಇದರಲ್ಲಿ ವಿವಿಧ ಜಿಲ್ಲೆಗಳ ನೂರಾರು ಮಂದಿ ಸ್ಪರ್ಧಿಗಳು ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ ಹಿಮಾಲಯನ್ 450ಸಿಸಿ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಕಾಶ್ ಐತಾಳ್ ಈ ವರ್ಷದ ಆಟೋಕ್ರಾಸ್ ನ ಚಾಂಪಿಯನ್ ನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಜೊತೆಗೆ ಏಸ್ ಮೊಬೈಕ್ಸ್ ನ ಮ್ಯಾನೇಜರ್ ಚೈತನ್ಯ ಅವರು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.


ಈ ಹಿಂದೆ ನಡೆದ ರಾಷ್ಟ್ರೀಯ ಮಟ್ಟದಲ್ಲಿ ರ‍್ಯಾಲಿಯಲ್ಲಿ ಹಲವು ಚಾಂಪಿಯನ್ ಪಡೆದುಕೊಂಡಿರುವ ಈ ವರ್ಷದ ಪ್ರಥಮ ರ‍್ಯಾಲಿಯಾಗಿ ಆಟೋ ಕ್ರಾಸ್ ನಲ್ಲಿ ಸ್ಪರ್ಧಿಸಿರುವ ಇವರು 2016ರಲ್ಲಿ ನಡೆದ ಆಟೋ ಕ್ರಾಸ್‌ನಲ್ಲಿ ಭಾಗವಹಿಸಿ ಚಾಂಪಿಯನ್ ಪಡೆದುಕೊಂಡಿದ್ದರು. ಈ ವರ್ಷದಲ್ಲಿ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಚೈತನ್ಯ ಅವರು ಕಳೆದ ಸಾಲಿನ ದಕ್ಷಿಣ್ ಡೇರ್ ನ ಗ್ರೂಪ್ ʼಡಿ‌ʼಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದರು.

LEAVE A REPLY

Please enter your comment!
Please enter your name here