ಅರುಣ ಸಾರಥಿ ಚಾಲಕರ ಸಂಘಟನೆಯ ವತಿಯಿಂದ ಧನಸಹಾಯ

0

ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿರುವ ಪುತ್ತೂರು ಮುಕ್ರಂಪಾಡಿ ನಿವಾಸಿ ಉಲ್ಲಾಸ್ ಅವರಿಗೆ ಅರುಣ ಸಾರಥಿ ಚಾಲಕರ ಸಂಘಟನೆಯ ವತಿಯಿಂದ 10,000 ರೂಪಾಯಿ ಧನಸಹಾಯವನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌”ನ ಸಂಚಾಲಕ ಅರುಣ್ ಕುಮಾ‌ರ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ ಹಿಂದವಿ ಕಛೇರಿಯಲ್ಲಿ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಸದಸ್ಯರಾದ ಸಂದೇಶ್ ನಾೖಕ್ ಕೆಯ್ಯೂರು,ಅನಿಲ್ ನೈತಾಡಿ,ಸಚಿನ್ ವಳತ್ತಡ್ಕ,ಸಚಿನ್ ತಾರಿಗುಡ್ಡೆ,ಯಶವಂತ ಮೊದಲಾದವರು ಉಪಸ್ಥಿತರಿದ್ದರು. “ಅರುಣ ಸಾರಥಿ” ಸಂಘಟನೆ ವತಿಯಿಂದ ಈವರೆಗೆ ಒಟ್ಟು 1,30,000 ರೂಪಾಯಿ ಧನಸಹಾಯವನ್ನು ಅನಾರೋಗ್ಯದಲ್ಲಿರುವವರಿಗೆ ನೀಡಲಾಗಿದೆ.

LEAVE A REPLY

Please enter your comment!
Please enter your name here