ಕಡೇಶ್ವಾಲ್ಯ ರೋಟರಿ ಸಮುದಾಯ ದಳದ ವಾರ್ಷಿಕೋತ್ಸವ, ಸಮ್ಮಾನ ಹಾಗೂ ಪ್ರತಿಭಾ ಪುರಸ್ಕಾರ

0

ಕಡೇಶಿವಾಲಯ: ಕಡೇಶ್ವಾಲ್ಯ ರೋಟರಿ ಸಮುದಾಯ ದಳದ ವಾರ್ಷಿಕೋತ್ಸವ, ಸಮ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಪೆರ್ಲಾಪು ಸ.ಹಿ.ಪ್ರಾ. ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದ ಸಭಾಧ್ಯಕ್ಷರಾಗಿ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ರೊ|PHF ಬಸ್ತಿ ಮಾಧವ ಶೆಣೈ ವಹಿಸಿದರು. ಮುಖ್ಯ ಅತಿಥಿಗಳಾಗಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ, ಗುರು ಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆ‌ರ್.ಪೂಜಾರಿ, ಉದ್ಯಮಿಗಳಾದ ಸುಧೀರ್ ಕುಮಾರ್ ಶೆಟ್ಟಿ ಪೇರಮೊಗರು, ರೋಟರಿ ಕ್ಲಬ್ ಬಂಟ್ವಾಳದ ಕಾರ್ಯದರ್ಶಿ ಯಾಸೀರ್ ಮೊಹಮ್ಮದ್ ಭಾಗವಹಿಸಿದರು.ರೋಟರಿ ಸಮುದಾಯ ದಳದ ಅಧ್ಯಕ್ಷ ರತ್ನಾಕರ ನಾಯ್ಕ್ ಪ್ರತಾಪನಗರ, ಕಾರ್ಯದರ್ಶಿ ಕಿಶೋರ್ ಕುಮಾರ್ ಬಿ ವೇದಿಕೆಯಲ್ಲಿ ಉಪಸ್ಥಿರಿದ್ದರು.

ಕಡೇಶ್ವಾಲ್ಯ ಗ್ರಾಮದ ಸರಕಾರಿ ಹಿ.ಪ್ರಾ. ಶಾಲೆ ಹಾಗೂ ಕಡೇಶ್ವಾಲ್ಯ ಸರಕಾರಿ ಕಡೇಶ್ವಾಲ್ಯ ಪ್ರೌಢಶಾಲೆಯ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಕೆನರಾ ಬ್ಯಾಂಕಿನ ನಿವೃತ್ತ ಸಹಾಯಕ ಮಹಾಪ್ರಬಂಧಕ ಮಾಧವ ರೈ ಅಮೈ ಭಂಡಸಾಲೆ ಮತ್ತು ಕೇಂದ್ರ ರೈಲ್ವೇ ಇಲಾಖೆಯ Rtd ಆಪರೇಷನ್ ಥಿಯೇಟರ್ ಅಸಿಸ್ಟೆಂಟ್ ಚಂದಪ್ಪ ನಾಯ್ಕ ದೇoತಡ್ಕ ಇವರನ್ನು ಸನ್ಮಾನಿಸಿ , ಮಂಗಳ ಶಾಮಿಯಾನ ಕಲ್ಲಾಜೆ ಇದರ ಮಾಲಕ ಮೋಹನ್ ಕುಮಾರ್ ಕಲ್ಲಾಜೆ ಇವರನ್ನು ಅಭಿನಂದಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಡೇಶ್ವಾಲ್ಯ ಜಿ.ವಿ.ಡ್ಯಾನ್ಸ್ ಕ್ರಿವ್ ಅವರಿಂದ ನೃತ್ಯ ಕಾರ್ಯಕ್ರಮ, ಕಾಪು ರಂಗತರಂಗ ಕಲಾವಿದರಿಂದ ತುಳು ನಾಟಕ ಕುಟ್ಯಣ್ಣನ ಕುಟುಂಬ ಪ್ರದರ್ಶನಗೊಂಡಿತು. ಸಂಸ್ಥೆಯ ಸಲಹಾ ಸಮಿತಿ ಚೇರ್‌ಮೆನ್ ಕೆ.ಕೆ.ಶೆಟ್ಟಿ ಕುರುಂಬಾಜೆ ಸ್ವಾಗತಿಸಿ, ಮಾಜಿ ಅಧ್ಯಕ್ಷ ಶೀನ ನಾಯ್ಕ ನೆಕ್ಕಿಲಾಡಿ ವಂದಿಸಿದರು. ನವೀನ್ ನಾಯ್ಕ ಪಿಳಿಂಗಳ ಹಾಗೂ ಯೋಗೀಶ್ ನಾಯ್ಕ್ ದಾಳಿಂಬ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here