






ಬೆಳಿಯೂರು ಕಟ್ಟೆ: ಬೆಳಿಯೂರು ಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಸುಮಾರು 14,200 ವೆಚ್ಚದಲ್ಲಿ ಮೂರು ಹಸಿರು ಬೋರ್ಡ್‌ಗಳನ್ನು ಪ್ರೌಢಶಾಲಾ ವಿಭಾಗದ ಕಾರ್ಯಾಧ್ಯಕ್ಷರಾದ ಕೆ.ಬಿ. ಮಹಮ್ಮದ್ ಅಶ್ರಫ್ ಅವರ ಸಹೋದರರಾದ ಕೆ.ಬಿ. ಅನ್ವರ್ ಸಾದತ್ ಅವರು ಕೊಡುಗೆ ನೀಡಿದರು. ಈ ಸಹಾಯದಿಂದ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕಾಲೇಜು ಆಡಳಿತವು ತಿಳಿಸಿದೆ. ಅವರನ್ನು ಸಂಸ್ಥೆಯ ಪ್ರಾಂಶುಪಾಲರು ಪದಾಧಿಕಾರಿಗಳು ಅಭಿನಂದಿಸಿದರು.












