







ಪುತ್ತೂರು: ಕಾಂಗ್ರೆಸ್ ನಾಯಕಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಜ.10ರಂದು ಬೆಳಿಗ್ಗೆ 10ಗಂಟೆಗೆ ಬಿಜೆಪಿ ಮುಖಂಡ ಬೂಡಿಯಾರ್ ರಾಧಾಕೃಷ್ಣ ರೈ ಅವರ ಸಹೋದರ ಗಣೇಶ್ ರೈ ಬೂಡಿಯಾರ್ ಅವರ ಮನೆಗೆ ಆಗಮಿಸಿ, ವಿದ್ಯುತ್ ಅವಘಡದಿಂದ ನಾಶವಾದ ಅಡಿಕೆ ತೋಟ ವೀಕ್ಷಣೆ ಮಾಡಲಿದ್ದಾರೆ, ಇವರ ಜೊತೆ ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿರುತ್ತಾರೆ ಎಂದು ತಿಳಿದು ಬಂದಿದೆ.











