ಕೌಕ್ರಾಡಿ: ಪರವಾನಿಗೆ ಇಲ್ಲದೆ ಮರದ ದಿಮ್ಮಿ ಸಾಗಾಟ ಪತ್ತೆ – ಮರದ ದಿಮ್ಮಿ, ಲಾರಿ ವಶ- ಚಾಲಕ ಬಂಧನ

0

ನೆಲ್ಯಾಡಿ: ಪರವಾನಿಗೆ ಇಲ್ಲದೆ ಲಾರಿಯಲ್ಲಿ ಮರದ ದಿಮ್ಮಿ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ದಿಮ್ಮಿ, ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡ ಘಟನೆ ಜ.8ರಂದು ಮುಂಜಾನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕೌಕ್ರಾಡಿ ಗ್ರಾಮದ ಮಣ್ಣಗುಂಡಿಯಲ್ಲಿ ನಡೆದಿದೆ.


ಲಾರಿ ಚಾಲಕ, ಮಂಗಳೂರು ಸೋಮೇಶ್ವರ ನಿವಾಸಿ ರಫೀಕ್ ಬಂಧಿತ ಆರೋಪಿ. ಈತ ಸಕಲೇಶಪುರದಿಂದ ಮಂಗಳೂರು ಕಡೆಗೆ ಟೆನ್‌ವೀಲ್ ಲಾರಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ವಿವಿಧ ಕಾಡು ಜಾತಿಯ ಮರದ ದಿಮ್ಮಿಗಳನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದನ್ನು ಮಣ್ಣಗುಂಡಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಪತ್ತೆ ಹಚ್ಚಿದೆ.

ಆರೋಪಿಯನ್ನು ವಶಪಡಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಲಾರಿ ಹಾಗೂ ಅದರದಲ್ಲಿದ್ದ ವಿವಿಧ ಕಾಡು ಜಾತಿಯ 192 ಮರದ ದಿಮ್ಮಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಯತೀಂದ್ರ, ವಿನಯಚಂದ್ರ, ಪ್ರವೀಣ್, ಅರಣ್ಯ ರಕ್ಷಕರಾದ ವಿನಯಚಂದ್ರ ಆಳ್ವ, ಶಿವಾನಂದ ಕುದ್ರಿ, ಜಗದೀಶ್, ಅರಣ್ಯ ವೀಕ್ಷಕರಾದ ದಾಮೋದರ ಪೂಜಾರಿ, ದಿನೇಶ್ ಸೊಣಂದೂರು, ದಿನೇಶ್ ಗೌಡ, ಚಾಲಕ ಕೊಶೀರ್ ಸಹಕರಿಸಿದರು.

LEAVE A REPLY

Please enter your comment!
Please enter your name here