ಪುತ್ತೂರು: ಕರ್ತವ್ಯ ಲೋಪ ಆರೋಪ – ಎಎಸ್‌ಐ ಅಮಾನತು

0

ಪುತ್ತೂರು: ಕರ್ತವ್ಯ ಲೋಪ ಆರೋಪದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯ ಎಎಸ್‌ಐ ಮೋನಪ್ಪ ಎಂಬವರನ್ನು ಅಮಾನತು ಮಾಡಲಾಗಿದೆ.


ಜ.8ರಂದು ರಾತ್ರಿ ಕೆದಿಲ ಗ್ರಾಮದ ಸತ್ತಿಕಲ್ಲು ಎಂಬಲ್ಲಿ ನಡೆದ ಹಲ್ಲೆ ಘಟನೆಯನ್ನು ರಾತ್ರಿಯೇ ಇನ್‌ಸ್ಪೆಕ್ಟರ್‌ಗೆ ತಿಳಿಸದೆ ಮಾರನೆ ದಿನ ತಿಳಿಸಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಅಮಾನತಿನಲ್ಲಿಡಲಾಗಿದೆ ಎಂದು ತಿಳಿದು ಬಂದಿದೆ.

ಎಎಸ್‌ಐ ಮೋನಪ್ಪ ಅವರು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರತರಾಗಿದ್ದ ಸಂದರ್ಭ ನಡೆದಿದ್ದ ಹಲ್ಲೆ ಘಟನೆಯೊಂದರ ಕುರಿತು ಮೇಲಾಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡದೆ ಬೆಳಗ್ಗೆ ಮಾಹಿತಿ ನೀಡಿದ್ದಾರೆ.ಇದು ಕರ್ತವ್ಯ ಲೋಪವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಅಮಾನತಿನಲ್ಲಿಡಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here