






ಪುತ್ತೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಅಂಗವಾಗಿ ಪಡುಮಲೆ ಮರಾಟಿ ಸೇವಾ ಸಂಘದ ಸದಸ್ಯರಿಂದ ದೇವಸ್ಥಾನದ ಒಳಾಂಗಣಕ್ಕೆ ಚಪ್ಪರ ಹಾಕುವ ಕಾರ್ಯ ಶ್ರಮದಾನದ ಮೂಲಕ ನಡೆಯಿತು.


ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷೆ ಯಮುನಾ ವೖೆ.ಕೆ ನಾಯ್ಕ, ಅಧ್ಯಕ್ಷ ಅಪ್ಪಯ್ಯ ನಾಯ್ಕ ತಲೆಂಜಿ, ಪ್ರಧಾನ ಕಾರ್ಯದರ್ಶಿ ನಾರಾಯಣ ನಾಯ್ಕ ಪೇರಾಲು, ಕೋಶಾಧಿಕಾರಿ ಶ್ರೀಧರ ನಾಯ್ಕ ನೇರ್ಲಂಪ್ಪಾಡಿ ಹಾಗೂ ವಠಾರ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದರು.













