ರೆಂಜಲಾಡಿ ಇಸ್ಲಾಮಿಕ್ ಸೆಂಟರ್‌ನಲ್ಲಿ ಅಜ್ಮೀರ್ ಮೌಲೀದ್, ಸಭಾ ಕಾರ್ಯಕ್ರಮ, ಸನ್ಮಾನ ಸಮಾರಂಭ – ನಾವು ಗಳಿಸಿದ್ದರಲ್ಲಿ ಕಿಂಚಿತ್ತಾದರೂ ಸಮಾಜಕ್ಕೆ ಕೊಡಬೇಕು-ಖಾದರ್ ಹಾಜಿ ಅಮ್ಚಿನಡ್ಕ

0

ಪುತ್ತೂರು: ಭೂಮಿಯ ಮೇಲೆ ಯಾರೂ ಶಾಶ್ವತರಲ್ಲ, ಜೀವನದಲ್ಲಿ ಗಳಿಸಿದ ಸಂಪತ್ತಿನಿಂದ ಕಿಂಚಿತ್ತಾದರೂ ಸಮಾಜಕ್ಕೂ, ಸಮುದಾಯಕ್ಕೂ ಕೊಡುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು, ಅಲ್ಲಾಹು ನಮಗೆ ನೀಡಿರುವ ಸಂಪತ್ತಿನಲ್ಲಿ ಅಲ್ಪವನ್ನಾದರೂ ದಾನ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಅಂತವರ ಸಂಪತ್ತು ಇನ್ನಷ್ಟು ವರ್ಧಿಸಲಿದೆ ಎಂದು ಉದ್ಯಮಿ ಅಬ್ದುಲ್ ಖಾದರ್ ಹಾಜಿ ಅಮ್ಚಿನಡ್ಕ ಹೇಳಿದರು.

ಜ.9ರಂದು ರೆಂಜಲಾಡಿ ಇಸ್ಲಾಮಿಕ್ ಎಜುಕೇಶನ್ ಸೆಂಟರ್ ಆಶ್ರಯದಲ್ಲಿ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ ಹಾಗೂ ಅಜ್ಮೀರ್ ಮೌಲೀದ್ ಪ್ರಯುಕ್ತ ಹಮ್ಮಿಕೊಂಡಿದ್ದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಧಾರ್ಮಿಕ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಹುಸೈನ್ ದಾರಿಮಿ ರೆಂಜಲಾಡಿಯವರು ತಮ್ಮ ಸ್ವಂತ ಊರಲ್ಲಿ ಆರ್.ಐ.ಸಿ ಸಂಸ್ಥೆಯನ್ನು ಸಂಸ್ಥಾಪಿಸಿರುವುದು ನಿಜಕ್ಕೂ ಗ್ರೇಟ್, ಇದಕ್ಕೆ ನಾವೆಲ್ಲರೂ ಸಹಕಾರ ನೀಡಬೇಕು, ನಾನಂತೂ ಆರ್.ಐ.ಸಿ ಸಂಸ್ಥೆ ಜೊತೆ ಯಾವತ್ತೂ ಇದ್ದೇನೆ, ಅದರಲ್ಲಿ ಸಂಶಯ ಬೇಡ ಎಂದು ಅವರು ಹೇಳಿದರು.

ಜ.9ರಂದು ರೆಂಜಲಾಡಿ ಇಸ್ಲಾಮಿಕ್ ಎಜುಕೇಶನ್ ಸೆಂಟರ್ ಆಶ್ರಯದಲ್ಲಿ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ ಹಾಗೂ ಅಜ್ಮೀರ್ ಮೌಲೀದ್ ಪ್ರಯುಕ್ತ ಹಮ್ಮಿಕೊಂಡಿದ್ದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಧಾರ್ಮಿಕ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಹುಸೈನ್ ದಾರಿಮಿ ರೆಂಜಲಾಡಿಯವರು ತಮ್ಮ ಸ್ವಂತ ಊರಲ್ಲಿ ಆರ್.ಐ.ಸಿ ಸಂಸ್ಥೆಯನ್ನು ಸಂಸ್ಥಾಪಿಸಿರುವುದು ನಿಜಕ್ಕೂ ಗ್ರೇಟ್, ಇದಕ್ಕೆ ನಾವೆಲ್ಲರೂ ಸಹಕಾರ ನೀಡಬೇಕು, ನಾನಂತೂ ಆರ್.ಐ.ಸಿ ಸಂಸ್ಥೆ ಜೊತೆ ಯಾವತ್ತೂ ಇದ್ದೇನೆ, ಅದರಲ್ಲಿ ಸಂಶಯ ಬೇಡ ಎಂದು ಅವರು ಹೇಳಿದರು.

ಮಾಡನ್ನೂರು ಮಸೀದಿಯ ಖತೀಬ್ ಎಸ್.ಬಿ ಮುಹಮ್ಮದ್ ದಾರಿಮಿ ಮಾತನಾಡಿ ಆರ್.ಐ.ಸಿ ಸಂಸ್ಥೆಯ ಬೆಳವಣಿಗೆಗೆ ವ್ಯವಸ್ಥಿತ ಕಾರ್ಯಚಟುವಟಿಕೆ ನಡೆಯುತ್ತಿದ್ದು ಭವಿಷ್ಯದಲ್ಲಿ ಈ ಸಂಸ್ಥೆ ಎತ್ತರಕ್ಕೆ ಬೆಳೆಯುವುದರಲ್ಲಿ ಸಂಶಯವಿಲ್ಲ, ಇಂತಹ ಸಂಸ್ಥೆಗಳಿಗೆ ನಾವೆಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.

ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ.ಎಸ್ ಮುಹಮ್ಮದ್ ಮಾತನಾಡಿ ಶಿಕ್ಷಣ ಸಂಸ್ಥೆಗಳಿಗೆ ನೆರವು ನೀಡಿದರೆ ಅದು ಸುಂದರ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ, ಹುಸೈನ್ ದಾರಿಮಿಯವರ ನೇತೃತ್ವದಲ್ಲಿ ನಡೆಯುವ ಆರ್.ಐ.ಸಿ ಸಂಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ನಾವೆಲ್ಲರೂ ಒಗ್ಗಟ್ಟಾಗಿ ಸಹಕಾರ ನೀಡಬೇಕು, ಈ ಸಂಸ್ಥೆಯ ಬಗ್ಗೆ ಪ್ರಚಾರ ಮಾಡಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆರ್.ಐ.ಸಿ ಸಂಸ್ಥೆಯ ಅಧ್ಯಕ್ಷ ಹುಸೈನ್ ದಾರಿಮಿಯವರು ಆರ್.ಐ.ಸಿ ಶಿಕ್ಷಣ ಸಂಸ್ಥೆಯ ಮೂಲಕ ಐ.ಎ.ಎಸ್, ಐ.ಪಿ.ಎಸ್ ಮಾಡುತ್ತೇವೆ ಎಂದು ನಾನು ಹೇಳುತ್ತಿಲ್ಲ, ಇಲ್ಲಿ ಸಂಸ್ಕಾರಯುತ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಇಲ್ಲಿ ಕಲಿತ ವಿದ್ಯಾರ್ಥಿಯನ್ನು, ತಂದೆ ತಾಯಿಯ ಓರ್ವ ಉತ್ತಮ ಮಗನಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವಂತಹ ಶಿಕ್ಷಣ ನೀಡುತ್ತೇವೆ, ಅಂಕ ಕಡಿಮೆ ಇರುವ, ಬಡತನದಲ್ಲಿರುವ, ಮಕ್ಕಳಿಗೆ ಆದ್ಯತೆ ನೀಡಿ ಶಿಕ್ಷಣ ನೀಡುತ್ತೇವೆ, ಅವರನ್ನು ಅತ್ಯುತ್ತಮ ಮಕ್ಕಳನ್ನಾಗಿ ರೂಪಿಸುತ್ತೇವೆ ಎಂದು ಹೇಳಿದರು. ಈ ಸಂಸ್ಥೆಗೆ ಖಾದರ್ ಹಾಜಿ ಅಮ್ಚಿನಡ್ಕ, ಆದಂ ಹಾಜಿ ಕಮ್ಮಾಡಿ ಅವರಂತಹ ಅನೇಕರ ಸಹಕಾರ ಸಿಗುತ್ತಿದ್ದು ಸಂಸ್ಥೆಯನ್ನು ಇನ್ನಷ್ಟು ಉತ್ತಮವಾಗಿ ಕೊಂಡೊಯ್ಯಲು ನಿಮ್ಮೆಲ್ಲರ ಸಹಕಾರ ಬೇಕಾಗಿದೆ, ತಾನು ಗಳಿಸಿದ್ದನ್ನು ಸಮಾಜಕ್ಕೆ ನೀಡಿ ಸೋತವರು ಯಾರೂ ಇಲ್ಲ, ಹಾಗಾಗಿ ದಾನ ಮಾಡಲು ಯಾರೂ ಹಿಂಜರಿಯದಿರಿ ಎಂದು ಹುಸೈನ್ ದಾರಿಮಿ ಹೇಳಿದರು.

ಮನ್ಸೂರ್ ಇಲಾಹಿ, ಸತ್ತಾರ್ ಸಖಾಫಿ, ಅನ್ಸಾರುದ್ದೀನ್ ಜಮಾಅತ್ ಕಮಿಟಿ ಪ್ರ.ಕಾರ್ಯದರ್ಶಿ ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಕಾಂಗ್ರೆಸ್ ಮುಖಂಡ ಹನೀಫ್ ಬಗ್ಗುಮೂಲೆ ಮಾತನಾಡಿ ಶುಭ ಹಾರೈಸಿದರು.

ಉದ್ಯಮಿ ಆದಂ ಹಾಜಿ ಕಮ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ಸತ್ತಾರ್ ಸಖಾಫಿ ದುವಾ ನೆರವೇರಿಸಿದರು.

ಸನ್ಮಾನ ಕಾರ್ಯಕ್ರಮ:
ಉದ್ಯಮಿ ಅಬ್ದುಲ್ ಖಾದರ್ ಹಾಜಿ ಅಮ್ಚಿನಡ್ಕ, ಆದಂ ಹಾಜಿ ಕಮ್ಮಾಡಿ, ಸಮೀರ್ ಪಾಶಾ ಕೋಲಾರ ಹಾಗೂ ಲತೀಫ್ ಟಿ.ಎ ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಆರೋಗ್ಯನಾಥ್ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವಿಶೇಷ ಅತಿಥಿಯಾಗಿದ್ದ ಸಮೀರ್ ಪಾಶಾ ಕೋಲಾರ, ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬ್ಬಾಸ್ ಮದನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರ್.ಐ.ಸಿ ಯೂತ್ ವಿಂಗ್ ಅಧ್ಯಕ್ಷ ಪಿ.ಕೆ ಮುಹಮ್ಮದ್ ಕೂಡುರಸ್ತೆ, ಕಾರ್ಯದರ್ಶಿ ಉಮ್ಮರ್ ಸುಲ್ತಾನ್ ರೆಂಜಲಾಡಿ ಮತ್ತಿತರರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕೆ.ಎಂ ಹನೀಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು.

ಅಜ್ಮೀರ್ ಮೌಲೀದ್:
ಅಬೂನಜಾ ಉಸ್ತಾದ್ ನೇತೃತ್ವದಲ್ಲಿ ಅಜ್ಮೀರ್ ಮೌಲೀದ್ ಮಜ್ಲಿಸ್ ನಡೆಯಿತು. ಮಜ್ಲಿಸ್‌ನಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here