






ಪುತ್ತೂರು:ಕೆಯ್ಯೂರು ಗ್ರಾಮ ವ್ಯಾಪ್ತಿಯ ಕೆಲವೆಡೆ ಕಾಡುಕೋಣಗಳ ಉಪಟಳದಿಂದ ಅಪಾರ ಪ್ರಮಾಣದ ಕೃಷಿ ಹಾನಿಯಾಗಿರುವುದಾಗಿ ವರದಿಯಾಗಿದೆ.


ಇಳಂತಾಜೆ ಪರಿಸರದಲ್ಲಿ ರಸ್ತೆ ಬದಿಯ ಗುಡ್ಡದಲ್ಲಿ ಹಗಲಲ್ಲೇ ಕಾಡುಕೋಣಗಳ ಹಿಂಡು ಕಾಣಿಸಿಕೊಂಡಿದೆ.ಈಗಾಗಲೇ ಕಾಡಾನೆ ಹಾವಳಿಯಿಂದ ಕೃಷಿಹಾನಿಯಾಗಿ ನಷ್ಟ ಅನುಭವಿಸಿರುವ ಇಲ್ಲಿನ ಕೃಷಿಕರು ಇದೀಗ ಕಾಡು ಕೋಣಗಳ ಉಪಟಳದಿಂದಾಗಿ ಕಂಗೆಟ್ಟಿದ್ದಾರೆ.



ಕೆಯ್ಯೂರು ಗ್ರಾಮದ ಕಣಿಯಾರು, ಪಲ್ಲತ್ತಡ್ಕ, ಇಳಂತಾಜೆ, ಕೆಂಗುಡೇಲು, ಕೆಯ್ಯೂರು, ಬಳಕ್ಕ ವ್ಯಾಪ್ತಿಯ ಕೃಷಿ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಕಾಡುಕೋಣಗಳ ಹಿಂಡು ಕೃಷಿ ಹಾನಿ ಮಾಡುತ್ತಿದೆ.ಕಾಡು ಕೋಣಗಳ ಜತೆಗೆ ಕಾಡು ಹಂದಿಗಳ ಉಪಟಳವೂ ಹೆಚ್ಚಾಗುತ್ತಿದೆ.ಅಡಿಕೆ ಸಸಿ, ಬಾಳೆ ಗಿಡ, ತೆಂಗಿನ ಗಿಡ ಸೇರಿದಂತೆ ಕೃಷಿ ಬೆಳೆಗಳನ್ನು ಕಾಡುಕೋಣಗಳು ನಾಶಪಡಿಸುತ್ತಿವೆ.ಹಗಲಲ್ಲೂ ದಾರಿ ಬದಿಯಲ್ಲಿ ಕಾಡು ಕೋಣಗಳು ಕಾಣಿಸಿಕೊಳ್ಳುತ್ತಿವೆ ಎಂದು ತಿಳಿದು ಬಂದಿದೆ.










