ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ಕಸಬಾ ಒಕ್ಕೂಟದಿಂದ ಕ್ರೀಡೋತ್ಸವ

0

ಪುತ್ತೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಾರ್ಷಿಕೋತ್ಸವದ ಅಂಗವಾಗಿ ಪುತ್ತೂರು ಕಸಬಾ ಒಕ್ಕೂಟದಿಂದ ಕ್ರೀಡೋತ್ಸವ ಕಾರ್ಯಕ್ರಮ ನಡೆಸಲಾಯಿತು.

ಒಕ್ಕೂಟದ ಅಧ್ಯಕ್ಷೆ ರಮಾ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಂಜಲ್ಪಡ್ಪು ಬಿಇಎಮ್ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪ್ರಶಾಂತ್ ಮುರ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪೂರ್ಣೇಶ್ ಭಂಡಾರಿ, ವಲಯದ ಮೇಲ್ವಿಚಾರಕರಾದ ಲತಾ, ಕಸಬಾ ಒಕ್ಕೂಟದ ಸೇವಾ ಪ್ರತಿನಿಧಿಯಾದ ಪೂಜಾ, ಸಿಎಸ್‌ಸಿ ಕೇಂದ್ರದ ಭಾಗ್ಯಶ್ರೀ, ಕಾರ್ಯದರ್ಶಿ ಲಕ್ಷ್ಮೀಪ್ರಿಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಶರ್ಮಿಳ ಪ್ರಾರ್ಥಿಸಿ ಉಪಾಧ್ಯಕ್ಷೆ ಸುನಿತಾ ಕಾರ್ಯಕ್ರಮ ನಿರೂಪಿಸಿದರು. ವಲಯದ ಮೇಲ್ವಿಚಾರಕಿ ಲತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಯೋಗೀಶ್ವರಿ ಸ್ವಾಗತಿಸಿ ಕೋಶಾಧಿಕಾರಿ ಜಯಂತಿ ವಂದಿಸಿದರು. ಹಗ್ಗ ಜಗ್ಗಾಟ, ರಂಗೋಲಿ, ಬಾಟಲಿ ನೀರು ತುಂಬಿಸುವುದು, ನಿಂಬೆ ಚಮಚ ಓಟ, ಗುಂಡೆಸತ, ಲಕ್ಕಿ ಗೇಮ್, ಮಡಕೆ ಹೊಡೆಯುವ ಸ್ಪರ್ಧೆ ಮುಂತಾದ ಆಟೋಟ ಸ್ಪರ್ಧೆಗಳು ನಡೆಯಿತು.

LEAVE A REPLY

Please enter your comment!
Please enter your name here