






ಪುತ್ತೂರು: ತಾಲೂಕು ಅತ್ಯುತ್ತಮ ಯುವ ಸಂಸ್ಥೆ ಪ್ರಶಸ್ತಿ ಪುರಸ್ಕೃತ ವಿವೇಕಾನಂದ ಯುವಕ ವೃಂದ (ರಿ) ಕೌಡಿಚ್ಚಾರು ಅರಿಯಡ್ಕ ಇದರ ವತಿಯಿಂದ ರಾಷ್ಟೀಯ ಯುವ ದಿನ, ವಿವೇಕಾನಂದರ 163ನೇ ಜನ್ಮ ದಿನಾಚರಣೆಯನ್ನು ಸಂಘದ ಕಛೇರಿಯಲ್ಲಿ ಜ.12 ರಂದು ಆಚರಿಸಲಾಯಿತು.



ಕಾರ್ಯಕ್ರಮವನ್ನು ಯುವಕ ವೃಂದದ ಸದಸ್ಯರಾದ ಶಾಂತಪ್ಪ ಕುಲಾಲ್ ಕೌಡಿಚ್ಚಾರು ರವರು ದೀಪ ಪ್ರಜ್ವಲಿಸಿ, ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಶುಭಹಾರೈಸಿದರು.



ಕಾರ್ಯಕ್ರಮದಲ್ಲಿ ಯುವಕ ವೃಂದದ ಗೌರವ ಸಲಹೆಗಾರರಾದ ದೀಪಕ್ ಕುಲಾಲ್ ಉಪನ್ಯಾಸ ನೀಡಿದರು. ಯುವಕ ವೃಂದದ ಅಧ್ಯಕ್ಷರಾದ ಉದಯ ಆಕಾಯಿ ಶುಭಹಾರೈಸಿದರು. ಈ ಸಂದರ್ಭದಲ್ಲಿ, ಯುವಕ ವೃಂದದ ಗೌರವಾಧ್ಯಕ್ಷರಾದ ಬಾಲಕೃಷ್ಣ ಕುಲಾಲ್ ಕೌಡಿಚ್ಚಾರು, ಗೌರವ ಸಲಹೆಗಾರರಾದ ದುರ್ಗಾಪ್ರಸಾದ್ ಕುತ್ಯಾಡಿ, ಮಾಜಿ ಉಪಾಧ್ಯಕ್ಷರಾದ ಮುಕುಂದ ನಾಯ್ಕ ದೇವುಮೂಲೆ,
ಸದಸ್ಯರಾದ, ಗೋಪಾಲ ಮಣಿಯಾಣಿ ಪಾದಲಾಡಿ, ಬಾಲಕೃಷ್ಣ ರೈ ಬಳ್ಳಿಕಾನ, ನವೀನ್ ಕರ್ಕೇರ ಮಾಣಿಯಡ್ಕ, ಶ್ವೇತನ್ ಮಾಣಿಯಡ್ಕ ಸಹಕರಿಸಿದರು. ಈ ಕಾರ್ಯಕ್ರಮವನ್ನು ಯುವಕ ವೃಂದದ ಗೌರವ ಸಲಹೆಗಾರರಾದ ವಸಂತ ಕುಲಾಲ್ ವಂದಿಸಿ , ಸಾಂಸ್ಕೃತಿಕ ಜತೆ ಕಾರ್ಯದರ್ಶಿ ಚರಣ್ ರಾಜ್ ಎಂ ಡಿ, ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.










