






ಪುತ್ತೂರು: ಇತ್ತೀಚೆಗೆ ನಿಧನರಾದ ಹೂವಿನ ವ್ಯಾಪಾರಿ ಹರೀಶ್(ಹರ್ಷ) ಕಲ್ಲಾರೆ ಇವರಿಗೆ ಶ್ರದ್ಧಾಂಜಲಿ ಸಭೆಯು ಜ.11ರಂದು ಕಲ್ಲಾರೆ ಶ್ರೀಗುರುರಾಘವೇಂದ್ರ ಮಠದ ಸಭಾಂಗಣದಲ್ಲಿ ನಡೆಯಿತು.


ಕಲ್ಲಾರೆ ಶ್ರೀಗುರುರಾಘವೇಂದ್ರ ಮಠದ ಪೂವಪ್ಪ ಯು., ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ನ್ಯಾಯವಾದಿ ಈಶ್ವರ ಬೆಟ್ಟ, ಉದ್ಯಮಿ ಪ್ರಸನ್ನ ಕುಮಾರ್ ಶೆಟ್ಟಿ ಸಾಮೆತ್ತಡ್ಕ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್, ಗಿರೀಶ್, ಪುತ್ತಿಲ ಪರಿವಾರದ ರೂಪೇಶ್ ನಾಕ್ ಹಾಗೂ ಮೃತರ ಮನೆಯವರು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.













