ಕಡೇಶಿವಾಲಯ ದೇವಸ್ಥಾನ ಜೀರ್ಣೋದ್ದಾರದ ವಿಜ್ಞಾಪನಾ ಪತ್ರ ಬಿಡುಗಡೆ

0

ಕಡೇಶಿವಾಲಯ : ಕಡೇಶಿವಾಲಯ ಮಹಾತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಜೀರ್ಣೋದ್ದಾರದ ವಿಜ್ಞಾಪನಾ ಪತ್ರ ಬಿಡುಗಡೆ ದೇವಸ್ಥಾನದ ಶ್ರೀ ಲಕ್ಷ್ಮೀ ಕೃಪಾ ಸಭಾಂಗಣದಲ್ಲಿ ಜ.11ರಂದು ನಡೆಯಿತು.


ಸಮಾರಂಭದ ಸಭಾ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಮುಂಬೈಯ ಉದ್ಯಮಿ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಕುಸುಮೋಧರ ಡಿ ಶೆಟ್ಟಿ ಯವರು ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿ ಮಾತನಾಡಿ, “ಅಂದು ಶ್ರೀಲಂಕಾ ಕ್ಕೆ ಹನುಮಂತ ಸೇತುವೆ ನಿರ್ಮಿಸುವಾಗ ಅಳಿಲು ಮಾಡಿದ ಸೇವೆಯಂತೆ ನೀವೆಲ್ಲರೂ ನಮ್ಮ ಜೊತೆ ಕೈ ಜೋಡಿಸಿದರೆ ಖಂಡಿತಾ 1 ವರ್ಷದಲ್ಲಿ ಈ ದೇವಸ್ಥಾನ ಜೀರ್ಣೋದ್ದಾರಗೊಳ್ಳಲು ಸಾಧ್ಯ ಎಂದರು.


ವೇದಿಕೆಯಲ್ಲಿ ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ಡಾ!!ಶ್ರೀಪತಿ ರಾವ್ ದಾಳಿಂಬ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿ ನುಳಿಯಾಲು, ಅಮರನಾಥ ಅಜಿಲ ಆರಿಕಲ್ಲು, ದೇವಸ್ಥಾನದ ಅರ್ಚಕ ಹರಿಪ್ರಸಾದ್ ಭಟ್ ಮುಂಗೂರು, ಮೋಹನ್ ರೈ ಕರ್ನುರ್, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ನ ಸದಸ್ಯ ರವಿ ಶಂಕರ್ ಶೆಟ್ಟಿ ಬಡಾಜೇಗುತ್ತು, ಲೀಲೇಶ್ ಆರ್ ಶೆಟ್ಟಿ ಪಾಂಡಿಬೆಟ್ಟು, ನಾರಾಯಣ ನಾಯ್ಕ್ ಮುಂಬೈ, ಉತ್ತಮ ಶೆಟ್ಟಿ ಬೆಂಗಳೂರು, ಪ್ರದೀಪ್ ಕುಮಾರ್ ಶೆಟ್ಟಿ, ನವೀನ್ ಕುಮಾರ್ ಇಸ್ರೋ ಬೆಂಗಳೂರು, ಬಾಲಕೃಷ್ಣ ನಾಯ್ಕ್ ಸುಧೀರ್ ಶೆಟ್ಟಿ ಮುಂಬೈ, ಪ್ರಹ್ಲಾದ್ ಶೆಟ್ಟಿ ಜಡ್ತಿಲ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಚಿದಾನಂದ ಕಡೇಶಿವಾಲಯ, ಸಂಜೀವ ಪೂಜಾರಿ ದಾಸಕೋಡಿ, ಪ್ರೇಮ ಯಸ್ ಶೆಟ್ಟಿ ಮಿತ್ತಿಮಾರು, ದೊಡ್ಡ ರಂಗ ಪೂಜಾ ಸೇವಾ ಸಮಿತಿಯ ಅಧ್ಯಕ್ಷ ಕೂಸಪ್ಪ ಪೂಜಾರಿ ಪುನುಕೇದಡಿ, ಮೋಹನ್ ನೆತ್ತರ, ಜಯರಾಮ್ ಶೆಟ್ಟಿ ಕೆರೆಮೂಳೆ, ಚಂದ್ರಶೇಖರ ಶೆಟ್ಟಿ ಕುರುಂಬ್ಲಾಜೆ, ಸುಂದರ ರೈ ಕುರುಂಬ್ಲಾಜೆ, ರಮೇಶ್ ಕೆ ರಥ ಬೀದಿ, ಮೋಹನ್ ಕುಮಾರ್ ಕಲ್ಲಾಜೆ, ದಯಾನಂದ ಶೆಟ್ಟಿ ನಡ್ಯೇಲು, ಕಿರಣ್ ಶೆಟ್ಟಿ ನಡ್ಯೇಲು, ವಿಜಯ ಕುಮಾರ್ ಕಲ್ಲಾಜೆ ನವೀನ್ ಚಂದ್ರ ಶೆಟ್ಟಿ ಭಾವ ಗುತ್ತು, ಚಂದ್ರಾಯ ಪೂಜಾರಿ, ಸಂಜೀವ ಶೆಟ್ಟಿಗಾರ್, ಪುಷ್ಪಲತಾ ಚಿನ್ನಯ ಕಟ್ಟೆ, ಶುಭಧ ಶೆಟ್ಟಿ ಕಲ್ಲಾಜೆ, ಶಾಲಿನಿ ಬುಡೋಳಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.


ವ್ಯವಸ್ಥಾಪನ ಸಮಿತಿಯ ಸದಸ್ಯ ಈಶ್ವರ ಪೂಜಾರಿ ಹಿರ್ತಡ್ಕ ಸ್ವಾಗತಿಸಿ, ಹರಿಶ್ಚಂದ್ರ ಕಾಡಬೆಟ್ಟು ವಂದಿಸಿ, ವ್ಯವಸ್ಥಾಪನ ಸಮಿತಿಯ ಸದಸ್ಯ ಶೀನ ನಾಯ್ಕ್ ನೆಕ್ಕಿಲಾಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here