ಒಳಮೊಗ್ರು ಗ್ರಾಪಂ ಸದಸ್ಯ ಮಹೇಶ್ ರೈ ಕೇರಿಗೆ ಪಿತೃ ವಿಯೋಗ

0

ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ಕೇರಿ ಯವರ ತಂದೆ ಮೊಡಪ್ಪಾಡಿಗುತ್ತು ಕೇರಿ ಬಾಲಕೃಷ್ಣ ರೈ (80)ವ ರವರು ಜ.13 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಭವ್ಯ ವಿದ್ಯಾಪ್ರಸಾದ್ ಶೆಟ್ಟಿ , ಅಳಿಯ ಬೆಳ್ಳಿಪ್ಪಾಡಿ ಗುತ್ತಿನ ಮನೆ ವಿದ್ಯಾಪ್ರಸಾದ್ ಶೆಟ್ಟಿ , ಸೊಸೆ ಶಿಲ್ಪಾ ರೈ , ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.


ಗೂಡಂಗಡಿ ಬಾಲಣ್ಣ
ಬಾಲಕೃಷ್ಣ ರೈ ಯವರು ಹಲವು ವರ್ಷಗಳ ಕಾಲ ಪುತ್ತೂರಿನ ಮಯೂರ ಚಿತ್ರಮಂದಿರದ ಸಮೀಪ ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದು ಗೂಡಂಗಡಿ ಬಾಲಣ್ಣ ಎಂದೇ ಚಿರಪರಿಚಿತರಾಗಿದ್ದರು. ಇತ್ತೀಚಿನವರೇಗೆ ಒಳತ್ತಡ್ಕದಲ್ಲಿ ಹೋಟೆಲ್ ನಡೆಸುತ್ತಿದ್ದು ಜೊತೆಗೆ ಸುದ್ದಿ ಬಿಡುಗಡೆ ಪತ್ರಿಕೆ ವಿತರಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು.

LEAVE A REPLY

Please enter your comment!
Please enter your name here