ಡಾ.ನಝೀರ್ ಅಹಮದ್ ಕ್ಲಿನಿಕ್ ನಲ್ಲಿ ಮಾಸಿಕ ಥೈರಾಯಿಡ್ ಗ್ರಂಥಿಯ ತಪಾಸಣೆ, HBA1C, ಶುಗರ್, ಕೊಲೆಸ್ಟ್ರಾಲ್, ಬಿ.ಎಂ.ಡಿ ಉಚಿತ ತಪಾಸಣೆ

0

ಪುತ್ತೂರು: ವೈದ್ಯಕೀಯ ತಜ್ಞ ಡಾ.ನಝೀರ್ ಅಹಮ್ಮದ್ ಡಯಾಬಿಟಿಸ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು ಮತ್ತು ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ಮಾಸಿಕ ಥೈರಾಯಿಡ್ ಗ್ರಂಥಿಯ ತಪಾಸಣೆ, HBA1C, ಶುಗರ್, ಕೊಲೆಸ್ಟ್ರಾಲ್, ಬಿ.ಎಂ.ಡಿ ಉಚಿತ ತಪಾಸಣೆಯು ಜ.15ರಂದು ಕಲ್ಲಾರೆ ಕೃಷ್ಣ ಆರ್ಕೇಡ್ ನಲ್ಲಿನ ಡಾ.ನಝೀರ್ ಅಹಮದ್ ರವರ ಕ್ಲಿನಿಕ್ ನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜರಗಿತು.

 ಅತಿಯಾದ ದಣಿವು, ಸುಸ್ತು, ನಿತ್ರಾಣ, ಮಲಬದ್ಧತೆ ಅಥವಾ ಅತಿಸಾರ, ಶೀತಕ್ಕೆ ಅಥವಾ ತಾಪಕ್ಕೆ ಅಸಹಿಷ್ಣುತೆ, ಕೂದಲು ಉದುರುವಿಕೆ, ನೆನಪಿನ ಶಕ್ತಿ ಕುಂದುವುದು, ಏಕಾಗ್ರತೆ ಕಷ್ಟವಾಗುವುದು, ತೂಕ ಹೆಚ್ಚಾಗುವುದು ಅಥವಾ ಕಡಿಮೆ ಆಗುವುದು, ಹೆಂಗಸರಿಗೆ ಅತಿಯಾದ ಮಾಸಿಕ ಸ್ರಾವ ಅಥವಾ ನಿಯಮ ತಪ್ಪಿದ ಮಾಸಿಕ ಸ್ರಾವ, ಮೃದುವಾದ ಕರ್ಕಶ ಸ್ವರ, ಗಂಟಲಿನಲ್ಲಿ ಊದುಕೊಳ್ಳುವಿಕೆ, ಅಧಿಕ ಎದೆ ಬಡಿತ ಅಥವಾ ರಕ್ತದೊತ್ತಡವುಳ್ಳವರು ಶಿಬಿರದಲ್ಲಿ ಪಾಲ್ಗೊಂಡು ವೈದ್ಯಕೀಯ ತಜ್ಞ ಡಾ.ನಝೀರ್ ಅಹಮದ್ ರವರಲ್ಲಿ ಸೂಕ್ತ ಸಲಹೆ, ಚಿಕಿತ್ಸೆಯನ್ನು ಪಡೆದುಕೊಂಡರು. 

ವರ್ಷಕ್ಕೊಮ್ಮೆ ಕಣ್ಣಿನ ತಪಾಸಣೆ ಏಕೆ ಅಗತ್ಯ?.
ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಆರಂಭಿಸಿದರೆ ದೃಷ್ಟಿ ನಷ್ಟ ಹೊಂದುವುದನ್ನು ತಡೆಯಬಹುದು. 
ಮಧುಮೇಹ ಇರುವ ಪ್ರತಿಯೊಬ್ಬರೂ ವರ್ಷಕ್ಕೆ ಕನಿಷ್ಠ ಒಂದು ಬಾರಿ ಕಣ್ಣಿನ ಫಂಡಸ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆಧುನಿಕ ಫಂಡಸ್ ಕ್ಯಾಮೆರಾ ಮೂಲಕ ಸುಲಭ ತಪಾಸಣೆ

ಈ ಸಾಧನದ ಪ್ರಮುಖ ಲಾಭಗಳು:
ಕಣ್ಣು ವಿಸ್ತರಿಸುವ ಡ್ರಾಪ್ಸ್ ಅಗತ್ಯವಿಲ್ಲ (Non-dilated test), ನೋವಿಲ್ಲದ, ಸುರಕ್ಷಿತ ಮತ್ತು ವೇಗವಾದ ಪರೀಕ್ಷೆ, ಕೆಲ ನಿಮಿಷಗಳಲ್ಲಿ ಕಣ್ಣಿನ ಒಳಭಾಗದ ಸ್ಪಷ್ಟ ಡಿಜಿಟಲ್ ಚಿತ್ರ, ಆರಂಭಿಕ ಹಂತದ ರೆಟಿನೋಪತಿ ಕೂಡ ಪತ್ತೆ ಸಾಧ್ಯ, ವೃದ್ಧರು ಹಾಗೂ ಮಧುಮೇಹ ರೋಗಿಗಳಿಗೆ ತುಂಬಾ ಅನುಕೂಲ, ಈ ಪರೀಕ್ಷೆಯ ಮೂಲಕ ದೃಷ್ಟಿ ಕಡಿಮೆಯಾಗುವ ಮೊದಲೇ ರೆಟಿನಾ ಹಾನಿಯನ್ನು ಗುರುತಿಸಿ, ಕಾಲಕ್ಕೆ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.

ತಡೆಯುವುದು ಚಿಕಿತ್ಸೆಗೆ ಮಿಗಿಲು:
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸಿ, ವೈದ್ಯರ ಸಲಹೆಯಂತೆ ಔಷಧಿ ಸೇವಿಸಿ, ವರ್ಷಕ್ಕೊಮ್ಮೆ ಕಣ್ಣಿನ ಫಂಡಸ್ ಪರೀಕ್ಷೆ ಮಾಡಿಸಿಕೊಳ್ಳಿ, ಡಯಾಬಿಟಿಕ್ ರೆಟಿನೋಪತಿಯಿಂದಾಗುವ ದೃಷ್ಟಿ ನಷ್ಟ ತಡೆಯಬಹುದಾಗಿದೆ, ಆದರೆ ಕಳೆದುಕೊಂಡ ದೃಷ್ಟಿಯನ್ನು ಮರಳಿ ತರಲು ಸಾಧ್ಯವಿಲ್ಲ.
ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ, ಸದಸ್ಯ ಹೆರಾಲ್ಡ್ ಮಾಡ್ತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭಾಗವಹಿಸಿದ ಫಲಾನುಭವಿಗಳು..
ಶುಗರ್-𝟗𝟐 ಮಂದಿ
𝐇𝐛𝐚𝟏𝐜  -𝟔𝟓 ಮಂದಿ
ಕೊಲೆಸ್ಟೆರಾಲ್-𝟓𝟓 ಮಂದಿ
ಥೈರಾಯಿಡ್ – 𝟕𝟓 ಮಂದಿ
ಮೂಳೆ ಸಾಂದ್ರತೆ -𝟖𝟕 ಮಂದಿ
ರೆಟಿನಾ ತಪಾಸಣೆ-35 ಮಂದಿ


ರೆಟಿನೋಪತಿ ರಕ್ಷಣೆ ಬಗ್ಗೆ..

ಮಧುಮೇಹ ಕಣ್ಣಿನ ರೋಗಕ್ಕೆ ಮುಂಚಿತ ತಪಾಸಣೆ ಅತ್ಯವಶ್ಯ. ಮಧುಮೇಹ ರೋಗವು ದೇಹದ ಅನೇಕ ಅಂಗಗಳಿಗೆ ಹಾನಿ ಉಂಟುಮಾಡುವಂತೆ, ಕಣ್ಣಿನ ಒಳಭಾಗದ ರೆಟಿನಾ ಮೇಲೂ ನಿಧಾನವಾಗಿ ಪರಿಣಾಮ ಬೀರುತ್ತದೆ. ಈ ಸ್ಥಿತಿಯನ್ನು ಡಯಾಬಿಟಿಕ್ ರೆಟಿನೋಪತಿ ಎಂದು ಕರೆಯಲಾಗುತ್ತದೆ. ಗಮನಾರ್ಹವಾದ ವಿಷಯವೆಂದರೆ ಡಯಾಬಿಟಿಕ್ ರೆಟಿನೋಪತಿ ಪ್ರಾರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಕಣ್ಣು ಚೆನ್ನಾಗಿ ಕಾಣುತ್ತಿದ್ದರೂ ಒಳಗೆ ಹಾನಿ ನಡೆಯುತ್ತಿರಬಹುದು. ಆದ್ದರಿಂದ ಲಕ್ಷಣಗಳು ಕಾಣುವವರೆಗೆ ಕಾಯುವುದು ಅಪಾಯಕರ. ಅಧ್ಯಯನಗಳ ಪ್ರಕಾರ ಸುಮಾರು 30% ಮಧುಮೇಹ ರೋಗಿಗಳಿಗೆ ಜೀವನದ ಯಾವುದೋ ಹಂತದಲ್ಲಿ ಕಣ್ಣಿನ ಹಾನಿ ಉಂಟಾಗುತ್ತದೆ ಎಂದು ಕ್ಲಿನಿಕ್ ಪ್ರಕಟಣೆ ತಿಳಿಸಿದೆ.


LEAVE A REPLY

Please enter your comment!
Please enter your name here