ಕುಟ್ರುಪ್ಪಾಡಿ ಗ್ರಾ.ಪಂ. : ವಿಕಲಚೇತನರ ವಿಶೇಷ ಗ್ರಾಮಸಭೆ

0

ಕಡಬ: ವಿಕಲಚೇತನರ ವಿಶೇಷ ಗ್ರಾಮಸಭೆ ಜ.13ರಂದು ಕುಟ್ರುಪ್ಪಾಡಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.


ಗ್ರಾ.ಪಂ.ಅಧ್ಯಕ್ಷೆ ಸುಮನಾ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪುತ್ತೂರು ತಾ.ಪಂ.ವಿಕಲಚೇತನರ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್‌ಕುಮಾರ್‌ರವರು ವಿಕಲ ಚೇತನರ ವಿಶೇಷ ಗ್ರಾಮ ಸಭೆಯ ಉದ್ದೇಶದ ಬಗ್ಗೆ ತಿಳಿಸಿ, 21 ವಿಕಲತೆ ವಿಧಗಳು, ಕುಟ್ರುಪ್ಪಾಡಿ ಗ್ರಂಥಾಲಯ ಅರಿವು ಕೇಂದ್ರದಲ್ಲಿ ವಿಶೇಷ ಚೇತನರಿಗೆ ಸಾಧನ ಸಲಕರಣೆ, ದೃಷ್ಟಿ ಅಂಧತ್ವವುಳ್ಳ ವಿಶೇಷ ಚೇತನರಿಗೆ ಬಳಕೆಯಾಗುವ ಬ್ರೈಲ್ ಲಿಪಿ, ಅಬಕಾಸ್ ಹಾವು-ಏಣಿ ಆಟದ ಬಗ್ಗೆ ಮಾಹಿತಿ ನೀಡಿ, ಸೌಲಭ್ಯ ಬಳಕೆ ಮಾಡಿಕೊಳ್ಳುವಂತೆ ಹೇಳಿದರು. ಅಮೂಲ್ಯ ಆರ್ಥಿಕ ಸಾಕ್ಷರತಾ ಆಪ್ತ ಸಮಾಲೋಚಕಿ ಗೀತಾ ವಿಜಯ್‌ರವರು ಬ್ಯಾಂಕ್ ಖಾತೆ ನಿರ್ವಹಣೆ, ಬ್ಯಾಂಕ್ ಆರೋಗ್ಯ ವಿಮೆ ಬಗ್ಗೆ ಮಾಹಿತಿ ನೀಡಿದರು.


ಉಪಾಧ್ಯಕ್ಷೆ ಯಶೋಧಾ ಕೆ.ಆರ್., ಕಾರ್ಯದರ್ಶಿ ಗೋಪಿನಾಥ್, ಮಾಜಿ ಅಧ್ಯಕ್ಷ ಮೋಹನ್ ಕರೆಕೋಡಿ, ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ ಎ., ಸ್ವಾಗತಿಸಿ, ನಿರೂಪಿಸಿದರು. ಕುಟ್ರುಪಾಡಿ ಗ್ರಾಮ ಆಡಳಿತಾಧಿಕಾರಿ ರಮೇಶ್ ಕುಮಾರ್, ಗ್ರಾ.ಪಂ.ಸಿಬ್ಬಂದಿಗಳು, ಗ್ರಾಮೀಣ ಪುನರ್‌ವಸತಿ ಕಾರ್ಯಕರ್ತ ವಿವೇಕ್ ಬಿ. ಸಹಕರಿಸಿದರು. ಸಭೆಯಲ್ಲಿ ಆಶಾ ಕಾರ್ಯಕರ್ತೆಯರು, ಶಾಲಾ ಮುಖ್ಯಗುರುಗಳು, ಅಂಗನವಾಡಿ ಕಾರ್ಯಕರ್ತೆಯರು, ಕುಟ್ರುಪಾಡಿ ಆರೋಗ್ಯ ಕೇಂದ್ರದ ಸಮುದಾಯದ ಅಧಿಕಾರಿಗಳು, ವಿಕಲಚೇತನರು, ವಿಕಲ ಚೇತನರ ಪೋಷಕರು, ಸಂಜೀವಿನಿ ಒಕ್ಕೂಟದ ಸದಸ್ಯರು, ಕುಟ್ರುಪಾಡಿ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿಕಲಚೇತನರಿಗಾಗಿ ನಡೆದ ಅದೃಷ್ಟಚೀಟಿಯಲ್ಲಿ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿ ಆಕಾಶ್‌ಗೆ ಪ್ರಥಮ ಬಹುಮಾನ ಲಭಿಸಿತು.

LEAVE A REPLY

Please enter your comment!
Please enter your name here