







ಬಡಗನ್ನೂರು: ಪಡುಮಲೆ ಇಲ್ಲಿನ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಕಳೆದ 21 ವರ್ಷಗಳಲ್ಲಿ ಅಕ್ಷರ ದಾಸೋಹ ಸಿಬ್ಬಂದಿಯಾಗಿ ಕರ್ವವ್ಯ ನಿರ್ವಹಿಸಿ ಡಿ.31ರಂದು ಕರ್ತವ್ಯದಿಂದ ನಿವೃತ್ತಿಗೊಂಡ ಶಾರದ ಉದಯ ಕಾಮತ್ ಅಂಬಟೆಮೂಲೆರವರ ವಿದಾಯ ಸಮಾರಂಭ ಇತ್ತೀಚೆಗೆ ಪಡುಮಲೆ ಶಾಲಾ ಸಭಾಂಗಣದಲ್ಲಿ ನಡೆಯಿತು.



ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಯಂ.ಸಿ ಅಧ್ಯಕ್ಷೆ ವೇದಾವತಿ, ಉಪಾಧ್ಯಕ್ಷೆ ಸುಮಲತಾ, ಬಡಗನ್ನೂರು ಗ್ರಾ. ಪಂ ಸದಸ್ಯರಾದ ರವಿರಾಜ್ ರೖೆ ಸಜಂಕಾಡಿ, ಕಲಾವತಿ ಎಸ್ ಗೌಡ ಷಟ್ಲಡ್ಕ, ಪ್ರಭಾರ ಮುಖ್ಯ ಶಿಕ್ಷಕಿ ಪರಮೇಶ್ವರಿ, ಜಿ.ಪಿಟಿ ಶಿಕ್ಷಕಿ ಅರುಣಾ ಕುಮಾರಿ, ಅತಿಥಿ ಶಿಕ್ಷಕಿ ಸೌಮ್ಯ ಕೆ, ಗೌರವ ಶಿಕ್ಷಕಿ ವಿಲಾಶಿನಿ ಎ, ಅಕ್ಷರದಾಸೋಹ ಸಿಬ್ಬಂದಿ ಲಲಿತಾ ಎಸ್ ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮಕ್ಕಳ ಪೋಷಕರು, ಮತ್ತು ಮಕ್ಕಳು ಉಪಸ್ಥಿತರಿದ್ದರು.



ಪ್ರಭಾರ ಮುಖ್ಯ ಗುರು ಪರಮೇಶ್ವರಿ ಎ ಸ್ವಾಗತಿಸಿದರು. ಜಿಪಿಟಿ ಶಿಕ್ಷಕಿ ಅರುಣಕುಮಾರಿ ವಿ ಪ್ರಾಸ್ತಾವಿಕ ಮಾತನಾಡಿದರು ಅತಿಥಿ ಶಿಕ್ಷಕಿ ಸೌಮ್ಯ ಕೆ ನಿರೂಪಣೆ ಗೌರವ ಶಿಕ್ಷಕಿ ವಿಲಾಸಿನಿ ವಂದನಾರ್ಪಣೆಗೈದರು.









