







ಪುತ್ತೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಸ್ಕಂದಶ್ರೀ ಮಲೆಕುಡಿಯರ ಸಂಘ ಸುಬ್ರಹ್ಮಣ್ಯ ವರ್ಷಾವಧಿ ನಡೆಯುವ ಕುಕ್ಕೆ ಲಿಂಗ ಜಾತ್ರೆಯ ಪ್ರಯುಕ್ತ ಪುತ್ತೂರು ಸ್ವರ ಮಾಧುರ್ಯ ಸಂಗೀತ ಬಳಗದ ಬಾಲ ಕಲಾವಿದೆ ಸೋನಿಕಾ ಜನಾರ್ದನ್ ಮತ್ತು ತಂಡದವರಿಂದ ಭಕ್ತಿ ಭಾವ ಸಂಗೀತ ಕಾರ್ಯಕ್ರಮ ಜ.14 ರಂದು ಸುಬ್ರಹ್ಮಣ್ಯರ ರಥಬೀದಿಯ ನೂತನ ಸಭಾ ಭವನದಲ್ಲಿ ನಡೆಯಿತು.



ಸಂವಿಧಾನ ಪೀಠಿಕೆ ಗಾಯನ ಅಭಿಯಾನದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಶಹಬ್ಬಾಸ್ ಗಿಟ್ಟಿಸಿಕೊಂಡ ಪುತ್ತೂರಿನ ಬಾಲ ಕಲಾವಿದೆ ಸೋನಿಕಾ ಜನಾರ್ದನ್ ಸೇರಿದಂತೆ ಗಾಯಕರಾದ ಪುರುಷೋತ್ತಮ್ ಸುಬ್ರಮಣ್ಯ, ಕಾವ್ಯಶ್ರೀ ಗಡಿಯಾರ, ರಕ್ಷಿತಾ ಕೆರವರುಗಳಿಂದ ಭಕ್ತಿ ಭಾವ ಸಂಗೀತ ಕಾರ್ಯಕ್ರಮ ಮನರಂಜಿಸಿತು.




ಕೀ ಬೋರ್ಡ್ನಲ್ಲಿ ಹಿರಿಯ ಸಂಗೀತ ಕಲಾವಿದ ಬಾಬಣ್ಣ ಪುತ್ತೂರು, ರಿದಂ ಪ್ಯಾಡ್ನಲ್ಲಿ ಸಚಿನ್ ಪುತ್ತೂರು, ತಬಲಾದಲ್ಲಿ ಶರತ್ ಪೆರ್ಲ, ಗಿಟಾರ್ನಲ್ಲಿ ಸಂಗೀತ ಪುತ್ತೂರು ಸಹಕರಿಸಿದ್ದರು. ಮಹೇಶ್ ಸುಬ್ರಮಣ್ಯ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಬಾಲ ಕಲಾವಿದೆ ಸೋನಿಕಾ ಜನಾರ್ದನ್ರವರನ್ನು ಸಂಘದ ವತಿಯಿಂದ ಶಾಲು,ಫಲಪುಷ್ಪ, ಸ್ಮರಣಿಕೆಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ಗೌರವಾರ್ಪಣೆ
ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಪತ್ರಕರ್ತ ಸಿಶೇ ಕಜೆಮಾರ್ ರನ್ನು ಈ ಸಂದರ್ಭದಲ್ಲಿ ಶಾಲು,ಹಾರ,ಸ್ಮರಣಿಕೆಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸ್ಕಂದಶ್ರೀ ಯುವ ಮಲೆ ಕುಡಿಯರ ಸಂಘದ ಪದಾಧಿಕಾರಿಗಳಾದ ಲೋಕೇಶ್ ಎ. ಆರ್, ರೋಹಿತಾಕ್ಷ ಕೆ, ಭಾಸ್ಕರ ಎ, ಸರಕಾರಿ ಸಹಾಯಕ ಅಭಿಯೋಜಕ ಜನಾರ್ದನ್ ಬಿ ಪುತ್ತೂರು ಸಹಿತ ಹಲವು ಮಂದಿ ಉಪಸ್ಥಿತರಿದ್ದರು.










