ಸಾರೆಪುಣಿ ಮಸೀದಿಯಲ್ಲಿ ಸ್ವಲಾತ್ ವಾರ್ಷಿಕ-ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ದಾರುಲ್ ಉಲೂಮ್ ಮದರಸ ಮತ್ತು ಜಮಾಅತ್ ಕಮಿಟಿ ಸಾರೆಪುಣಿ ಇದರ ವತಿಯಿಂದ ಪ್ರತಿ ತಿಂಗಳು ನಡೆಸಿಕೊಂಡು ಬರುತ್ತಿರುವ 9ನೇ ವರ್ಷದ ಸ್ವಲಾತ್ ವಾರ್ಷಿಕವು ಸಾರೆಪುಣಿ ಮುಹಿಯುದ್ದಿನ್ ಜುಮಾ ಮಸೀದಿಯಲ್ಲಿ ನಡೆಯಿತು. ದುವಾ ನೇತೃತ್ವವನ್ನು ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ನೆರವೇರಿಸಿದರು, ಬಿ.ಎಸ್ ಅಬ್ಬಾಸ್ ಮದನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಥಳೀಯ ಖತೀಬ್ ಮನ್ಸೂರ್ ರಯೀಸಿ ಸ್ವಲಾತ್ ಮಜ್ಲಿಗೆ ನೇತೃತ್ವ ನೀಡಿದರು. ಮುಹಲ್ಲಿಮ್ ಹಮೀದ್ ಮುಸ್ಲಿಯಾರ್ ಉಪಸ್ಥಿತರಿದ್ದರು.

ನಂತರ ನಡೆದ ವಾರ್ಷಿಕ ಮಹಾಸಭೆಯಲ್ಲಿ 2026ನೇ ಸಾಲಿನ ಗೌರವಾಧ್ಯಕ್ಷರಾಗಿ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ಸಲಹೆಗಾರರಾಗಿ ಬಿ.ಎಸ್ ಅಬ್ಬಾಸ್ ಮದನಿ, ಅಧ್ಯಕ್ಷರಾಗಿ ಅಶ್ರಫ್ ಸಾರೆಪುಣಿ, ಉಪಾಧ್ಯಕ್ಷರಾಗಿ ಅಬ್ದುಲ್ ಶಕೂರ್ ದಾರಿಮಿ, ಪ್ರದಾನ ಕಾರ್ಯದರ್ಶಿಯಾಗಿ ಎಚ್.ಎ ಇಕ್ಬಾಲ್, ಕಾರ್ಯದರ್ಶಿ ರಫೀಕ್, ಕೋಶಾಧಿಕಾರಿಯಾಗಿ ಇಬ್ರಾಹಿಂ ಕುಯ್ಯಾರ್, ಲೆಕ್ಕಪರಿಶೋದಕರಾಗಿ ಇಬ್ರಾಹಿಂ ಎಸ್, ಆಯ್ಕೆಯಾದರು. ಸದಸ್ಯರುಗಳಾಗಿ ಎನ್.ಎಸ್ ಅಬ್ದುಲ್ಲ, ಅರಬ್ಬಿ ಕುಂಞಿ ಸಾರೆಪುಣಿ, ಅಬ್ದುಲ್ ರಝಾಕ್, ಉಸ್ಮಾನ್, ಎ ಲತೀಫ್, ಇಸ್ಮಾಯಿಲ್, ಇಕ್ಬಾಲ್ ಜಿ ಅವರನ್ನು ಆಯ್ಕೆ ಮಾಡಲಾಯಿತು. ಅಶ್ರಫ್ ಸಾರೆಪುಣಿ ಸ್ವಾಗತಿಸಿದರು. ಇಕ್ಬಾಲ್ ವಂದಿಸಿದರು.

LEAVE A REPLY

Please enter your comment!
Please enter your name here