







ಅರ್ಪಣಾ ಮನೋಭಾವದಿಂದ ದುಡಿದಾಗ ಅಭಿವೃದ್ಧಿ ಸಾಧ್ಯ: ತನಿಯಪ್ಪ ಪೂಜಾರಿ


ಉಪ್ಪಿನಂಗಡಿ: ಎಲ್ಲರೂ ಅರ್ಪಣಾ ಮನೋಭಾವದಿಂದ ದುಡಿದಾಗ ಭಜನಾ ಮಂದಿರದ ಅಭಿವೃದ್ಧಿ ಸಾಧ್ಯ. ಭಜನಾ ಮಂದಿರವೊಂದು ಅಭಿವೃದ್ಧಿಗೊಂಡಾಗ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ ಎಂದು ಬಿಳಿಯೂರು ಕರುವೇಲುವಿನ ಶ್ರೀ ರಾಮ ಭಜನಾ ಮಂದಿರದ ಗೌರವಾಧ್ಯಕ್ಷ ತನಿಯಪ್ಪ ಪೂಜಾರಿ ಹೊಸಮನೆ ತಿಳಿಸಿದರು.




ಭಜನಾ ಮಂದಿರದಲ್ಲಿ ಎರಡು ದಿನಗಳ ಕಾಲ ನಡೆದ ಗಣಪತಿ ಹವನ, ನವಕಲಶ ಪೂಜೆ, ಸಂಪ್ರೋಕ್ಷಣೆ ಶ್ರೀ ರಾಮ ಕಲ್ಪೋಕ್ತ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಭಜನಾ ಸಂಕೀರ್ತನೆ, ದುರ್ಗಾಪೂಜೆ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ವೇದಿಕೆಯಲ್ಲಿ ಸತೀಶ ಅಮಾಸೆ, ಕುಶಾಲಪ್ಪ ಹತ್ತುಕಲಸೆ, ರಾಜೇಶ್ ಪಡ್ಪು, ಶ್ರೀಮತಿ ಲಲಿತಾ ಬಾಣಬೆಟ್ಟು, ಮನೋಹರ ಕೆಳಗಿನ ಮನೆ ಉಪಸ್ಥಿತರಿದ್ದರು. ಪ್ರಮುಖರಾದ ತನಿಯಪ್ಪ ನಾಯ್ಕ ಹನಂಗೂರು, ಬಾಬು ನಾಯ್ಕ ಹನಂಗೂರು ಉಪಸ್ಥಿತರಿದ್ದರು. ಧರ್ನಪ್ಪ ಪೂಜಾರಿ ದಂಪತಿ ಉಪಸ್ಥಿತಿಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಶ್ರೀಮತಿ ಅಸ್ಮಿತಾ ಸ್ವಾಗತಿಸಿದರು. ಕು. ಆಕೃತಿ ವರದಿ ವಾಚಿಸಿದರು. ಪ್ರವೀಣ್ ಮಾಡತ್ತಾರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿಸ್ಮಯ ವಿನಾಯಕ ಬಳಗದ `ಕಡೆ ಕೊಡಿ’ ಕಾಮಿಡಿ ಕಾರ್ಯಕ್ರಮ ನಡೆಯಿತು.










