ಸೆಲ್‌ಝೋನ್‌ನಲ್ಲಿ ದೀಪಾವಳಿ ಫೆಸ್ಟಿವ್ ಧಮಕಾ ಸೇಲ್‌ನ ಬಂಪರ್ ಬಹುಮಾನ ಡ್ರಾ

0

ಪುತ್ತೂರು: ಮೊಬೈಲ್ ಫೋನ್‌ಗಳ ಸೇಲ್ಸ್ & ಸರ್ವಿಸ್‌ಗಳ ಪ್ರತಿಷ್ಠಿತ ಮಳಿಗೆ ಸೆಲ್‌ಝೋನ್‌ನಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಅಂಗವಾಗಿ ಆಯೋಜಿಸಿದ ‘ಫೆಸ್ಟೀವ್ ಧಮಕಾ ಸೇಲ್’ನ ಬಂಪರ್ ಬಹುಮಾನದ ಡ್ರಾ. ಜ.19ರಂದು ನಡೆಸಲಾಯಿತು. ಪ್ರತೀ ಖರೀದಿಗೆ ಲಕ್ಕಿ ಕೂಪನ್ ಮತ್ತು ಸ್ಕ್ರ್ಯಾಚ್ ಕಾರ್ಡ್ ಪಡೆದು ಬಂಪರ್ ಬಹುಮಾನಗಳಾದ ಬೈಕ್, ಸ್ಕೂಟರ್ ಎಲ್‌ಇಡಿ ಟಿ.ವಿ., ಐಫೋನ್, ಮಿಕ್ಸಿ ಹಾಗೂ ಇನ್ನಿತರ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ನೀಡಲಾಗಿತ್ತು.

ಎಸ್‌ಆರ್‌ಕೆ ಲ್ಯಾಡರ‍್ಸ್ ಮಾಲಕರಾದ ಕೇಶವ ಅಮೈರವರು ಬಂಪರ್ ಡ್ರಾ. ನಡೆಸಿಕೊಟ್ಟರು. ಬಂಪರ್ ಡ್ರಾ.ದ ಟಿವಿಎಸ್ ಜೆಸ್ಟ್ ಬಹುಮಾನವಿಜೇತರಾಗಿ ರಿಷಬ್ ಉರ್ಲಾಂಡಿ (CZ 1335 ) ಆಯ್ಕೆಯಾದರು. ನಾಲ್ಕು ಟ್ರಾಲಿ ಬಹುಮಾನ ವಿಜೇತರನ್ನು ಡ್ರಾ. ಮೂಲಕ ಆಯ್ಕೆ ಮಾಡಲಾಯಿತು.

ಕಲ್ಲಾರೆ ಹೊಮಿಯೋಪತಿ ಕ್ಲಿನಿಕ್‌ನ ಡಾ.ರಮೇಶ್ ಭಟ್, ಸುದರ್ಶನ್ ಎಂಟರ್‌ಪ್ರೈಸಸ್‌ನ ಅನೂಪ್, ಆರ್ವಿ ಇಂಟರ್‌ಗ್ರಾಫಿಕ್ಸ್‌ನ ಜ್ಞಾನೇಶ್‌ರವರು ಡ್ರಾ. ವಿಜೇತರ ಆಯ್ಕೆ ನಡೆಸಿದರು. ಸೆಲ್‌ಝೋನ್ ಸಂಸ್ಥೆಯ ಮಾಲಕರಾದ ಪ್ರವೀಣ್ ಅಮೈ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಂತೋಷ್ ಪುತ್ತೂರು ಹಾಗೂ ಸೆಲ್‌ಝೋನ್ ಸಂಸ್ಥೆಯ ಸಿಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here