ಪುತ್ತೂರು: ಸಂತಾನ ಹೀನತೆ ಬಗ್ಗೆ ಉಚಿತ ಮಾಹಿತಿ ಮತ್ತು ತಪಾಸಣಾ ಶಿಬಿರ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸಿಟಿ ,ಇನ್ನರ್ ವೀಲ್ ಕ್ಲಬ್ ಪುತ್ತೂರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪುತ್ತೂರು ಇದರ ಸಹಯೋಗದಲ್ಲಿ ಜನವರಿ 20ರಂದು ರೋಟರಿ ಮನಿಷಾ ಸಭಾಂಗಣದಲ್ಲಿ ಸಂತಾನ ಹೀನತೆ ಬಗ್ಗೆ ಉಚಿತ ಮಾಹಿತಿ ಮತ್ತು ತಪಾಸಣಾ ಶಿಬಿರ ಜರುಗಿತು.


ಸಂಪನ್ಮೂಲ ವ್ಯಕ್ತಿ NOVA IVF ಮಂಗಳೂರು ಸೀನಿಯರ್ ಕನ್ಸಲ್ಟೆಂಟ್ ಡಾಕ್ಟರ್ ಶಾವೀಝ್ ಫೈಝಿ ಭಾಗವಹಿಸಿ ಬಂಜೆತನ ನಿವಾರಿಸಲು ಐವಿಎಫ್ ಯಾವ ರೀತಿ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಅಸಿಸ್ಟೆಂಟ್ ಗವರ್ನರ್ ಎಂ ಪಿ ಎಚ್ ಎಫ್ ರಾಜಾರಾಮ್ ಕೆ ಬಿ ಅವರು ಮಾತನಾಡಿ, ಇದೊಂದು ಒಳ್ಳೆಯ ಭಾವನಾತ್ಮಕ ಕಾರ್ಯಕ್ರಮ ಎಂದರು.
ರೊಟೇರಿಯನ್ ಉಲ್ಲಾಸ್ ಪೈ ಅಧ್ಯಕ್ಷರು ರೋಟರಿ ಸಿಟಿ ಪುತ್ತೂರು, ಅವರು ತಮ್ಮ ಅಧ್ಯಕ್ಷೀಯ ಮಾತುಗಳನ್ನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಕಾರ್ಯಕ್ರಮವನ್ನು ಸಂಯೋಜಿಸಿದ ಗ್ರೇಸಿ ಗೊನ್ಸ್ ವಾಲಿಸ್ ಪ್ರಾಸ್ಥಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿ, ಇಂತಹ ಕಾರ್ಯಕ್ರಮ ನಡೆಸುವ ಅಗತ್ಯತೆಯನ್ನು ಸಭೆಗೆ ತಿಳಿಸಿ ಪ್ರೋತ್ಸಾಹಿಸಿದರು. ಡಾಕ್ಟರ್ ವೀಣಾ ಉಚ್ಚಿಲ್ ಮಾತನಾಡಿ, ಮಕ್ಕಳಿಲ್ಲದವರು ಐವಿಎಫ್ ಮೂಲಕ ಮಕ್ಕಳನ್ನು ಪಡೆಯಬಹುದು ಎಂದರು.


ಮಕ್ಕಳ ಕಲ್ಯಾಣ ಮತ್ತು ಅಭಿವೃದ್ಧಿ ಇಲಾಖೆಯ ಸೀನಿಯರ್ ಸೂಪರ್ವೈಸರ್ ವನಿತಾ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಇನ್ನರ್ ವೀಲ್ ಕ್ಲಬ್ ಪುತ್ತೂರಿನ ಅಧ್ಯಕ್ಷೆ ರೂಪಲೇಖ ಪಾಣಾಜೆ ವಂದಿಸಿದರು. ರೋಟರಿ ಸಿಟಿ ಕಾರ್ಯದರ್ಶಿ ಡಾ॥ಪುಡಿಯ ಹಾಗೂ ಇನ್ನರ್ ವೀಲ್ ಕ್ಲಬ್ ಪುತ್ತೂರು ಇದರ ಕಾರ್ಯದರ್ಶಿ ಸಂಧ್ಯಾ ಸಾಯ ಉಪಸ್ಥಿತರಿದ್ದರು.


ಸಭಾ ಕಾರ್ಯಕ್ರಮದ ನಂತರ 90 ದಂಪತಿಗಳಿಗೆ Dr ಶಾವೀಝ್ NOVA IVFಮಂಗಳೂರು ಅವರ ಪರಿಣತ ತಂಡದಿಂದ ಉಚಿತ ಸಮಾಲೋಚನಾ ಕಾರ್ಯಕ್ರಮಗಳು ನಡೆದವು.
ಇನ್ನರ್ ವೀಲ್ ಹಾಗೂ ರೋಟರಿ ಯುವ ಮಾಜಿ ಅಧ್ಯಕ್ಷೆ ಅಶ್ವಿನಿ ಮುಳಿಯ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ತ್ರೀಶಕ್ತಿ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here