






ಪುತ್ತೂರು: ಕಬಕ ಶ್ರೀ ಮಹಾದೇವಿ ಕಲಾಮಂದಿರದಲ್ಲಿ ಶ್ರೀ ಮಹಾದೇವಿ ಧರ್ಮ ಸೇವಾ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ವಿ. ಚಂದ್ರಶೇಖರ್ ನಾಯ್ಕ್ ರವರ ಅಧ್ಯಕ್ಷತೆಯಲ್ಲಿ ಕಬಕ ಶ್ರೀ ಮಹಾದೇವಿ ಮಹಿಳಾ ಮಂಡಲದ ಪದಗ್ರಹಣ ಕಾರ್ಯಕ್ರಮ ನಡೆಯಿತು. ನೂತನ ಅಧ್ಯಕ್ಷರಾಗಿ ಸೌಮ್ಯ ಮೂವಳ, ಪ್ರಧಾನ ಕಾರ್ಯದರ್ಶಿಯಾಗಿ ಗೀತಾ ಕಳಮೆಮಜಲು ಆಯ್ಕೆಯಾದರು.


ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಜತ್ತಪ್ಪ ಗೌಡ ಅಡ್ಯಾಲು, ನಾಗ ಮತ್ತು ಪಂಚ ದೈವಗಳ ಸಮಿತಿ ಅಧ್ಯಕ್ಷರು ಆನಂದ್ ನೆಕ್ಕರೆ, ಶ್ರೀ ಮಹಾದೇವಿ ಯುವಕ ಮಂಡಲದ ಅಧ್ಯಕ್ಷರು ರಾಜ ವಿದ್ಯಾಪುರ, ಕಾರ್ಯದರ್ಶಿ ಪ್ರಸಾದ್ ಮೂವಳ, ಯುವಕ ಮಂಡಲದ ಮಾಜಿ ಅಧ್ಯಕ್ಷರು ಜಯರಾಮ್ ನೆಕ್ಕರೆ, ಮಾಜಿ ಕಾರ್ಯದರ್ಶಿ ಯತೀಶ್ ಪದ್ನಡ್ಕ,ಮಹಿಳಾ ಮಂಡಲದ ನಿಕಟಪೂರ್ವ ಅಧ್ಯಕ್ಷರು ರೇಷ್ಮಾ ನೆಕ್ಕರೆ,ಮಾಜಿ ಅಧ್ಯಕ್ಷರು ಲಲಿತಾ ವಿದ್ಯಾಪುರ, ಪೂರ್ಣಿಮಾ ಆಚಾರ್ಯ ಕಬಕ, ಮಹಿಳಾ ಮಂಡಲದ ಸದಸ್ಯರು ಆಶಾ ಆಲದಗುಂಡಿ, ಸುಧಾ ಆಚಾರ್ಯ ಕಬಕ,ಲೀಲಾವತಿ ಆಲದಗುಂಡಿ,ಸ್ನೇಹ ನೆಕ್ಕರೆ, ವೀಣಾ ಬಾಕಿಮಾರ್,ವಸಂತಿ ಆಲದಗುಂಡಿ, ಪುಷ್ಪ ಕಬಕಬೈಲು, ಗೀತಾ ಅಡ್ಯಾಲು,ಶಾಂತಮ್ಮ ಕರ್ಗಲ್ಲು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.













