ಪಡುಮಲೆ ಬುದ್ದಿವಂತರ ಚಾವಡಿಯಲ್ಲಿ ಹುಲಿಭೂತ ನೇಮ

0

ಪುತ್ತೂರು: ಪಡುಮಲೆ ಜಾತ್ರೋತ್ಸವ ಅಂಗವಾಗಿ ಪಡುಮಲೆ ಬೀಡು ಬುದ್ದಿವಂತರ ಚಾವಡಿಯಲ್ಲಿ ಹುಲಿಭೂತ ನೇಮ ಜ.20ರಂದು ನಡೆಯಿತು.

ಜ.19 ರಂದು ರಾತ್ರಿ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಕಾರ್ತಿಕ ಪೂಜೆ ಪ್ರಸಾದ ವಿತರಣೆ ನಡೆಯಿತು. ಬಳಿಕ ಪೂಮಾಣಿ ಕಿನ್ನಿಮಾಣಿ ಹಾಗೂ ವ್ಯಾಘ್ರಚಾಮುಂಡಿ ದೖೆವಸ್ಥಾನದಲ್ಲಿ ಶ್ರೀ ದೖೆವಗಳಿಗೆ ತಂಬಿಲ ಸೇವೆ ನಡೆದು ಬಳಿಕ ಶ್ರೀ ದೖೆವದ ಭಂಡಾರವನ್ನು ಪೇರಾಲು ಬುದ್ದಿವಂತರ ಚಾವಡಿಗೆ ಬ್ಯಾಂಡ್ ವಾದ್ಯ ಘೋಷದೊಂದಿಗೆ ಬಂದು ಶ್ರೀ ದೈವದ ಚಾವಡಿಯಲ್ಲಿ ಸದಾಶಿವ ಭಟ್ ಪೖೆರುಪುಣಿ ನೇತೃತ್ವದಲ್ಲಿ ತಂಬಿಲ ಸೇವೆ ನಡೆಯಿತು.

ಜ.20ರಂದು ಬೆಳಗ್ಗೆ ಹುಲಿಭೂತ ನೇಮ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕೂವೆ ಶಾಸ್ತಾರ ವಿಷ್ಣು ಮೂರ್ತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಗೌರವಾಧ್ಯಕ್ಷ  ಬಾಲ್ ರಾಜ್ ಶೆಟ್ಟಿ ನಿಟ್ಟೆಗುತ್ತು ಪೇರಾಲು, ದೇವಸ್ಥಾನದ  ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮನೋಜ್ ರೖೆ ಪೇರಾಲು ಮತ್ತು  ಅಶಿತ್ ರೖೆ ಕುದುರೆಮಜಲು  ಹಾಗೂ ಊರಿನವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here