






ಉಪ್ಪಿನಂಗಡಿ: ಗೃಹರಕ್ಷಕ ದಳ ಉಪ್ಪಿನಂಗಡಿ ಘಟಕದ ನೂತನ ಪ್ರಭಾರ ಘಟಕಾಧಿಕಾರಿಯಾಗಿ ಘಟಕದ ಹಿರಿಯ ಗೃಹರಕ್ಷಕ ಹಾಗೂ ಪ್ರಸ್ತುತ ಸಾರ್ಜೆಂಟ್ ಗ್ರೇಡ್ನಲ್ಲಿರುವ ರಾಮಣ್ಣ ಆಚಾರ್ ಅವರನ್ನು ಜೇಷ್ಠತೆ ಆಧಾರದ ಮೇಲೆ ನೂತನ ಪ್ರಭಾರ ಘಟಕಾಧಿಕಾರಿಯಾಗಿ ನೇಮಿಸಿ ದ.ಕ. ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಎಸ್. ಬೂಮ ರೆಡ್ಡಿ ಅವರು ಆದೇಶಿಸಿದ್ಧಾರೆ.


ದಕ್ಷಿಣ ಕನ್ನಡ ಜಿಲ್ಲೆಯ ಭೋದಕರಾದ ಶಿವ ಪ್ರಸಾದ್ ರವರು ಘಟಕದ ಗೃಹರಕ್ಷಕರ ಸಮ್ಮುಖದಲ್ಲಿ ಆದೇಶ ಪತ್ರ ಹಸ್ತಾಂತರಿಸಿದರು. ಈ ಸಂದರ್ಭ ಸೆಕ್ಷನ್ ಲೀಡರ್ ದಿನೇಶ್ ಬಿ., ಜನಾರ್ದನ ಆಚಾರ್ಯ ಹಾಗೂ ಗೃಹ ರಕ್ಷಕರು ಉಪಸ್ಥಿತರಿದ್ದರು.













