ಪುತ್ತೂರು ನ್ಯಾಯಾಲಯದಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನ

0

ಪುತ್ತೂರು:ಇಲ್ಲಿನ ನ್ಯಾಯಾಲಯದ ಒಳಗೇ ವ್ಯಕ್ತಿಯೊಬ್ಬರು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವಿಶಿಷ್ಟ ಘಟನೆ ಜ.22ರಂದು ನಡೆದ ಬಗ್ಗೆ ವರದಿಯಾಗಿದೆ.


ಮಾಡ್ನೂರು ಗ್ರಾಮದ ಮಾಣಿಯಡ್ಕ ಕಾಲನಿ ನಿವಾಸಿ ರವಿ (32ವ)ಎಂಬವರು ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡವರು.ವೃತ್ತಿಯಲ್ಲಿ ರಬ್ಬರ್ ಟ್ಯಾಪರ್ ಆಗಿರುವ ರವಿಯವರಿಗೆ ಇತ್ತೀಚೆಗಷ್ಟೆ ಮದುವೆಯಾಗಿತ್ತು.ವೈವಾಹಿಕ ಮನಸ್ತಾಪದ ಹಿನ್ನೆಲೆಯಲ್ಲಿ ಅವರ ಪತ್ನಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿರುವ ಕುರಿತು ಮಾಹಿತಿ ಅರಿತು ರವಿ ಅವರು ನ್ಯಾಯಾಲಯದ ಸಂಕೀರ್ಣಕ್ಕೆ ತೆರಳಿ ನ್ಯಾಯಾಲಯದ ಒಳಗೆ ಪ್ರವೇಶಿಸಿ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದರು.ತಕ್ಷಣ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.ನ್ಯಾಯಾಲಯದ ಸಂಕೀರ್ಣದಲ್ಲಿ ಸದ್ರಿ ಘಟನೆ ನಡೆದಿರುವುದರಿಂದ ನ್ಯಾಯಾಧಿಶರು ಸ್ವಯಂ ದೂರನ್ನು ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.


3 ತಿಂಗಳ ಹಿಂದೆ ವಿವಾಹ:
ರವಿ ಅವರು ಮೂರು ತಿಂಗಳ ಹಿಂದೆಯಷ್ಟೆ ವಿವಾಹವಾಗಿದ್ದರು. ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡು ಪತಿ-ಪತ್ನಿ ನಡುವೆ ಗಲಾಟೆ ನಡೆದು,ಪತ್ನಿ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.ಬಳಿಕದ ಬೆಳವಣಿಗೆಯಲ್ಲಿ ರವಿಯವರ ಪತ್ನಿ ದೂರು ನೀಡಲೆಂದು ಸಂಪ್ಯ ಪೊಲೀಸ್ ಠಾಣೆಗೆ ಹೋದಾಗ ಅಲ್ಲಿಂದ ಮಹಿಳಾ ಪೊಲೀಸ್ ಠಾಣೆಗೆ ಕಳುಹಿಸಿದ್ದರು.ಜ.21ರ ರಾತ್ರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಿ ಪೊಲೀಸರು ರವಿಯವರಿಗೆ ಕರೆ ಮಾಡಿದ್ದರೆಂದು ತಿಳಿದು ಬಂದಿದೆ.ಅದರ ಬೆನ್ನಲ್ಲೇ ಜ.22ರಂದು ರವಿಯವರು ಅತ್ಮಹತ್ಯೆಗೆ ಯತ್ನಿಸಿದ್ದಾರೆ.ಈ ಸಂದರ್ಭ ಅವರ ಪತ್ನಿಯೂ ಜೊತೆಗಿದ್ದರೆಂದು ತಿಳಿದು ಬಂದಿದೆ.


LEAVE A REPLY

Please enter your comment!
Please enter your name here