







ಪುತ್ತೂರು: ‘ಎಂ.ಎಸ್ ಸಾಫ್ಟೆಕ್ ಸೊಲ್ಯೂಷನ್ಸ್ & ಟ್ರಾವೆಲ್ಸ್’ ಜ.22ರಂದು ಕುಂಬ್ರ ರೋಯಲ್ ದರ್ಬಾರ್ ಹೋಟೆಲ್ ಮುಂಭಾಗದ ಭಾರತ್ ಕಾಂಪ್ಲೆಕ್ಸ್ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು. ಶೈಖುನಾ ಮಹಮೂದುಲ್ ಫೈಝಿ ಓಲೆಮುಂಡೋವು ನೂತನ ಸಂಸ್ಥೆಯನ್ನು ಉದ್ಘಾಟಿಸಿ, ಪ್ರಾರ್ಥನೆ ನೆರವೇರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಾಬಿರ್ ಕೇಕನಾಜೆ, ರಝಾಕ್ ಸಖಾಫಿ ನೇರೋಳ್ತಡ್ಕ, ಮುಹಮ್ಮದ್ ಹನೀಫ್ ನೇರೋಳ್ತಡ್ಕ, ಮುಹಮ್ಮದ್ ಶಾಫಿ ಕೇಕನಾಜೆ, ಹಸನ್ ಸಖಾಫಿ ಬೆಳ್ಳಾರೆ, ಅಬ್ದುಲ್ಲ ಗಟ್ಟಮನೆ, ಉಮ್ಮರ್ ಕೂರ್ನಡ್ಕ, ನೌಶಾದ್ ಅಹ್ಸನಿ ಬೆಳ್ಳಾರೆ ಮತ್ತಿತರರು ಉಪಸ್ಥಿತರಿದ್ದರು.



ಎಂ.ಎಸ್ ಸಾಫ್ಟೆಕ್ ಸೊಲ್ಯೂಷನ್ಸ್ & ಟ್ರಾವೆಲ್ಸ್ ಸಂಸ್ಥೆಯಲ್ಲಿ ವೀಸಾ ಸ್ಟಾಂಪಿಂಗ್, ವಿಮಾನ ಟಿಕೆಟ್, ಟ್ರೈನ್ ಟಿಕೆಟ್, ಹಾಲಿಡೇ ಪ್ಯಾಕೇಜ್, ಉಮ್ರಾ ಪ್ಯಾಕೇಜ್, ಪಾನ್, ಆಧಾರ್, ಜಿಎಸ್ಟಿ, ಎಂಎಸ್ಎಂಇ, ಸ್ಕಾಲರ್ಶಿಪ್ ಸೇರಿದಂತೆ ವಿವಿಧ ಸೌಲಭ್ಯಗಳು ಲಭ್ಯವಿದೆ ಸಂಸ್ಥೆಯ ಮಾಲಕರಾದ ಅಬ್ದುಲ್ ರಹಿಮಾನ್ ಎಂ.ಎಸ್ ತಿಳಿಸಿದರು.













