ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ಸುದಾನ ಶಾಲೆಗೆ ಶೇಕಡಾ 100 ಫಲಿತಾಂಶ

0


ಪುತ್ತೂರು: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯವರು ನಡೆಸಿದ ಚಿತ್ರಕಲಾಗ್ರೇಡ್ ಪರೀಕ್ಷೆಯಲ್ಲಿ ಪುತ್ತೂರಿನ ಸುದಾನ ವಸತಿ ಶಾಲೆಯ 14 ವಿದ್ಯಾರ್ಥಿಗಳು ಲೋವರ್ ಹಾಗೂ ಹೈಯರ್‌ಗ್ರೇಡ್ ಪರೀಕ್ಷೆಯಲ್ಲಿ ಭಾಗವಹಿಸಿದ್ದು, ಇದರಲ್ಲಿ 8 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿಯೂ, 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿಯೂ ಉತ್ತೀರ್ಣರಾಗಿ ಶೇ.100 ಫಲಿತಾಂಶವನ್ನು ದಾಖಲಿಸಿದ್ದಾರೆ. ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದವರು ಒಂಭತ್ತನೇ ತರಗತಿಯ ವಿದ್ಯಾರ್ಥಿಗಳಾದ ದೇವ ಮುರಾರಿ ಗುಂಜನ್‌ ಆರ್, ನವನೀತ್ ವೈ ಕೆ ಮತ್ತು ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಅನಘ, ಚರೀಷ್ಮಾ ಕೆ, ಲಹರಿ ಕೆ ಒ, ಲಿಪಿಕಾ ಆರ್ ಕೆ, ಶಮಿತಾ ಎಂ, ಶರ್ಮಿಳಾ ಕೆ.ಹಾಗೂ ಪ್ರಥಮ ಶ್ರೇಣಿಯಲ್ಲಿ ಎಂಟನೇ ತರಗತಿಯ ಮಾನ್ವಿ ಡಿ ಹಾಗೂ ಕ್ರಿಸ್‌ರಿಯೋನ್ ಲಸ್ರಡೊ,ಹೃತ್ವೀಕ ಆರ್ ನಾಯ್ಕ್ ಕೆ, ಕೌಶಿಕ್ ಎಸ್,ಎಂ. ಪ್ರಣವ್,ತನ್ವಿ ಪಿ ಆರ್‌ ಉತ್ತೀರ್ಣರಾಗಿದ್ದಾರೆ.


ಉತ್ತಮ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳನ್ನು ಸುದಾನ ಶಾಲೆಯ ಚಿತ್ರಕಲಾ ಶಿಕ್ಷಕ ಸದಾಶಿವ ಭಟ್‌ ಮಾರ್ಗದರ್ಶನ ನೀಡಿದ್ದು,ಶಾಲಾ ಸಂಚಾಲಕರಾದರೆ. ವಿಜಯ ಹಾರ್ವಿನ್ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಾ ನಾಗರಾಜ್‌ರವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here