






ಪುತ್ತೂರು: ಕೊಳ್ತಿಗೆ ಗ್ರಾಮದಲ್ಲಿ ಕೃಷಿ ಕೆಲಸದ ಸಂದರ್ಭ ತೋಡಿನ ನೀರಿನ ರಭಸಕ್ಕೆ ಕೊಚ್ಚಿಹೋಗಿ ಮೃತಪಟ್ಟಿರುವ ಕೃಷಿ ಕಾರ್ಮಿಕ ಶಿವರಾಮ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ಪರಿಹಾರ ಧನ ಮಂಜೂರಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.


ಕೊಳ್ತಿಗೆ ಶಿವರಾಮ ಬಿ. ಅವರು ಕಳೆದ ಸೆ.3ರಂದು ತೋಡಿನ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿರುತ್ತಾರೆ.
ಕುಟುಂಬಕ್ಕೆ ಆಧಾರವಾಗಿದ್ದ ಶಿವರಾಮ ಬಿ. ಇವರ ಮರಣದ ಬಳಿಕ ಕುಟುಂಬವು ಆರ್ಥಿಕತೆಯ ಬಗ್ಗೆ ಬೇರೆ ಯಾವುದೇ ಆದಾಯವಿರುವುದಿಲ್ಲ, ಸದರಿ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರ ಧನ ಮಂಜೂರು ಮಾಡುವಂತೆ ಶಾಸಕ ಅಶೋಕ್ ರೈ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು. ಶಾಸಕರ ಶಿಫಾರಸ್ಸನ್ನು ಪರಿಗಣಿಸಿದ ಮುಖ್ಯಮಂತ್ರಿಗಳು ಕುಟುಂಬಕ್ಕೆ ಪರಿಹಾರ ಧನವನ್ನು ಮಂಜೂರು ಮಾಡಿದ್ದಾರೆ. ಶಿವರಾಮ ಬಿ ಅವರ ಕುಟುಂಬಸ್ಥರು ಶಾಸಕರ ಬಳಿ ಆರ್ಥಿಕ ನೆರವು ಒದಗಿಸಿಕೊಡುವಂತೆ ಮನವಿ ಮಾಡಿದ್ದರು.













