ಪುತ್ತೂರು: ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 8 ಮಂದಿಗೆ ಚಿಕಿತ್ಸಾ ಧನ ಬಿಡುಗಡೆ

0

ಪುತ್ತೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಿಹಾರ ನಿಧಿಯಿಂದ ಪುತ್ತೂರು ತಾಲೂಕು ಹಾಗೂ ಸುಳ್ಯ ತಾಲೂಕಿನ ಒಟ್ಟು 8 ಮಂದಿಗೆ ಪರಿಹಾರ ಧನ ಬಿಡುಗಡೆಯಾಗಿದೆ. ಪುತ್ತೂರು ಶಾಸಕ ಅಶೋಕ್ ರೈ ಅವರ ಶಿಫಾರಸ್ಸಿನಂತೆ ಮುಖ್ಯಮಂತ್ರಿಗಳು ಈ ಪರಿಹಾರ ಧನವನ್ನು ಬಿಡುಗಡೆ ಮಾಡಿದ್ದಾರೆ.


ಕುರಿಯ ಗ್ರಾಮದ ಫಾತಿಮಾ ಎಂಬ ಬಾಲಕಿಗೆ ಕಣ್ಣಿನಲ್ಲಿ ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆಗೆ 2 ಲಕ್ಷ, ಕೆಯ್ಯೂರು ಗ್ರಾಮದ ರಫೀಕ್ ಖಾನ್ ಅವರ ಹೃದಯಸಂಬಂಧಿ ಕಾಯಿಲೆ ಚಿಕಿತ್ಸಗೆ 25 ಸಾವಿರ, ಕೇಪು ಗ್ರಾಮದ ಎದುರಕಜೆ ನಿವಾಸಿ ಆಸ್ಯಮ್ಮ ಅವರಿಗೆ ಸ್ಟ್ರೋಕ್ ಚಿಕಿತ್ಸೆಗೆ 1 ಲಕ್ಷ, ನೆಟ್ಟಣಿಗೆ ಮುಡ್ನೂರು ಗ್ರಾಮದ ಅಬ್ದುಲ್ ಅಲ್ ಫಾಝ್‌ಗ ರವರ ಮೆದುಳು ಚಿಕಿತ್ಸೆಗೆ 60 ಸಾವಿರ, ಒಳಮೊಗ್ರು ಗ್ರಾಮದ ಶರೀಫ್ ಶೇಕಮಲೆ ಅವರ ಕ್ಯಾನ್ಸರ್ ಚಿಕಿತ್ಸೆಗೆ 50 ಸಾವಿರ, ನರಿಮೊಗರು ಗ್ರಾ,ಮದ ಒತ್ತೆಮುಂಡೂರು ನಿವಾಸಿ ಶಾಲಿನಿ ಅವರ ಗರ್ಭಕೋಶ ಚಿಕಿತ್ಸೆಗೆ 50 ಸಾವಿರ,ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಆಲಂತಡ್ಕ ನಿವಾಸಿ ಖತೀಜಮ್ಮ ಅವರ ಹೃದಯ ಕಾಯಿಲೆಯ ಚಿಕಿತ್ಸೆಗೆ 1ಲಕ್ಷ ಹತ್ತು ಸಾವಿರ, ಬೆಳ್ತಂಗಡಿ ತಾಲೂಕಿನ ಕರಾಯ ನಿವಾಸಿ ಬೀಫಾತುಮ್ಮ ಅವರ ಮೆದುಳು ಚಿಕಿತ್ಸೆಗೆ 75 ಸಾವಿರ ಪರಿಹಾರ ನಿಧಿ ಬಿಡುಗಡೆಯಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here