ಕರ್ನೂರು: ತೋಟದ ಕೆಲಸ ಮಾಡುತ್ತಿದ್ದ ಕಾನತ್ತೂರು ಮೂಲದ ಕಾರ್ಮಿಕ ಮೃತ್ಯು

0

ಪುತ್ತೂರು:ತೋಟದ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ನೆಟ್ಟಣಿಗೆಮುಡ್ನೂರು ಗ್ರಾಮದ ಕರ್ನೂರು ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.


ಕಾಸರಗೋಡಿನ ಕಾನತ್ತೂರು ಮೂಲದ ಪೀತಾಂಬರ(51ವ)ರವರು ಮೃತಪಟ್ಟವರು.ಅವರು ಸುಮಾರು 12 ವರ್ಷಗಳಿಂದ ಮನೆ ಬಿಟ್ಟು ಹೋಗಿ ನೆಟ್ಟಣಿಗೆಮುಡ್ನೂರು ಗ್ರಾಮದ ಕರ್ನೂರು ಎ.ಬಿ. ಅಬ್ಬಾಸ್ ಅವರ ಮನೆಯಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದರು.ಜ.20ರಂದು ಪೀತಾಂಬರ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರು ಸ್ಥಳೀಯ ಕ್ಲಿನಿಕ್‌ಗೆ ಹೋಗಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಾಸರಗೋಡು ಸರಕಾರಿ ಆಸ್ಪತ್ರೆಗೆ ಹೋಗಿದ್ದರು.ಅಲ್ಲಿಂದ ವಾಪಸ್ಸಾಗುತ್ತಿದ್ದಂತೆ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿ ನಿಧನರಾಗಿದ್ದಾರೆ.ಮೃತರ ಸಹೋದರ ವಿನೋದ್ ಕುಮಾರ್ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here