






ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಹಾಗೂ ವಿಶ್ವವಿದ್ಯಾನಿಲಯ SPYSS ಕರ್ನಾಟಕ ಇವರ ಸಹಯೋಗದಲ್ಲಿ ರಾಷ್ಟ್ರೀಯ ಸೂರ್ಯ ಪ್ರಣಾಮ ದಿನಾಚರಣೆ ಅಂಗವಾಗಿ 108 ಸೂರ್ಯ ನಮಸ್ಕಾರಗಳ ಸಾಮೂಹಿಕ ಅಭ್ಯಾಸ ಕಾರ್ಯಕ್ರಮ ಜ.25ರಂದು ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿದೆ.



ಬೆಳಿಗ್ಗೆ 5.00ರಿಂದ 7.00 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದ್ದು, ಸಾವಿರಾರು ಯೋಗಾಭ್ಯಾಸಿಗಳು ಒಂದೇ ವೇದಿಕೆಯಲ್ಲಿ ಭಾಗವಹಿಸಿ ಆರೋಗ್ಯ, ಶಿಸ್ತಿನ ಜೀವನ ಮತ್ತು ಮಾನಸಿಕ ಸಮತೋಲನದ ಸಂದೇಶವನ್ನು ಸಮಾಜಕ್ಕೆ ನೀಡಲಿದ್ದಾರೆ.
ಈ ವಿಶೇಷ ಯೋಗ ಕಾರ್ಯಕ್ರಮವು ದೈಹಿಕ-ಮಾನಸಿಕ ಆರೋಗ್ಯವನ್ನು ಉತ್ತೇಜಿಸುವುದರ ಜೊತೆಗೆ ರಾಷ್ಟ್ರಭಕ್ತಿಯ ಭಾವನೆ, ಆತ್ಮಶಕ್ತಿ ಮತ್ತು ಶಿಸ್ತು ಬೆಳೆಸುವ ಉದ್ದೇಶವನ್ನು ಹೊಂದಿದೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












