34 ನೆಕ್ಕಿಲಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ: 13 ನಿರ್ದೇಶಕ ಸ್ಥಾನಗಳಿಗೂ ಅವಿರೋಧ ಆಯ್ಕೆ

0

ಅಧ್ಯಕ್ಷರಾಗಿ ಗೋಪಾಲಕೃಷ್ಣ, ಉಪಾಧ್ಯಕ್ಷರಾಗಿ ರಾಜೀವ ಪೂಜಾರಿ


ಉಪ್ಪಿನಂಗಡಿ: 34 ನೆಕ್ಕಿಲಾಡಿಯ ಹಾಲು ಉತ್ಪಾದಕರ ಸಹಕಾರಿ ಸಂಘದ 13 ನಿರ್ದೇಶಕ ಸ್ಥಾನಕ್ಕೂ ಅವಿರೋಧ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ಗೋಪಾಲಕೃಷ್ಣ ಗೌಡ ಹಾಗೂ ಉಪಾಧ್ಯಕ್ಷರಾಗಿ ರಾಜೀವ ಪೂಜಾರಿ ಐ. ಅವರು ಆಯ್ಕೆಯಾಗಿದ್ದಾರೆ. ಗೋಪಾಲಕೃಷ್ಣ ಗೌಡರು ಎರಡನೇ ಬಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿದೆ.


ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ರಾಮಕೃಷ್ಣ ನಾಯ್ಕ, ಚೆನ್ನಕೇಶವ, ಕೆ. ಗೋಪಾಲಕೃಷ್ಣ ಗೌಡ, ಧನಂಜಯ ಗೌಡ, ಮೋನಪ್ಪ ಗೌಡ, ಜಲಜಾಕ್ಷಿ, ಶೀನಪ್ಪ ಗೌಡ, ವಿಜಯಲಕ್ಷ್ಮೀ, ವಾರಿಜ, ರಾಜೀವ ಪೂಜಾರಿ ಐ., ನಾರಾಯಣ ಗೌಡ, ಮೋಹನ ನಾಯ್ಕ, ಜಯಂತಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿಲಾಸ್ ಕುಮಾರ್ ಘೋಷಿಸಿದರು. ಬಳಿಕ ನಿರ್ದೇಶಕರು ಅಧ್ಯಕ್ಷರನ್ನಾಗಿ ಕೆ. ಗೋಪಾಲಕೃಷ್ಣ ಗೌಡ ಹಾಗೂ ಉಪಾಧ್ಯಕ್ಷರನ್ನಾಗಿ ರಾಜೀವ ಪೂಜಾರಿ ಐ. ಅವರನ್ನು ಆಯ್ಕೆ ಮಾಡಿದರು. ಸಂಘದ ಕಾರ್ಯದರ್ಶಿ ಕೆ. ರಾಜೇಶ್ ನಾಯಕ್, ಸಹಾಯಕ ಕೇಶವ ನಾಮಪತ್ರ ಸಲ್ಲಿಕೆ ಸಂದರ್ಭ ಸಹಕರಿಸಿದರು

LEAVE A REPLY

Please enter your comment!
Please enter your name here