ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ’ ಸಂಭ್ರಮದ ‘ವ್ಯಾಪಾರ ಮೇಳ’ (business carnival)

0

ಪುತ್ತೂರು: ಮಕ್ಕಳಲ್ಲಿ ಪ್ರಾಯೋಗಿಕ ಅನುಭವ, ಕೌಶಲ್ಯಾಭಿವೃದ್ಧಿ, ಸಂಘಟನಾ ಚಾತುರ್ಯ, ಜವಾಬ್ದಾರಿ, ಸಮರ್ಪಣೆಯಂತಹ ಬಹಳಷ್ಟು ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಇದೇ ಜನವರಿ 23ರಂದು ‘ವ್ಯಾಪಾರ ಮೇಳ’ವನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ಇವರು; ಇಂತಹ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಹಣದ ಮೌಲ್ಯ , ಲಾಭ ನಷ್ಟಗಳ ಬಗ್ಗೆ ತಿಳುವಳಿಕೆ, ಶಿಸ್ತು ಮುಂತಾದ ಗುಣಗಳನ್ನು ಅಳವಡಿಸಿಕೊಳ್ಳಲು ನೆರವಾಗುತ್ತದೆ ಎಂದು ಹೇಳುತ್ತಾ ಶುಭ ಹಾರೈಸಿದರು.

ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಭರತ್ ಪೈ, ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ರವೀಂದ್ರ ಪಿ ರೈ, ಆಡಳಿತ ಮಂಡಳಿಯ ಸದಸ್ಯೆ ಪ್ರೀತಿ ಶೆಣೈ, ಶೈಕ್ಷಣಿಕ ಸಲಹೆಗಾರರಾದ ಅನುರಾಧ ಶಿವರಾಮ್ ಉಪಸ್ಥಿರಿದ್ದರು.

ಸಭಾ ಕಾರ್ಯಕ್ರಮದ ಬಳಿಕ, 5ನೇ ತರಗತಿಯಿಂದ 9ನೇ ತರಗತಿಯವರೆಗೆ 39 ತಂಡಗಳಲ್ಲಿ ನಡೆದ ಮಕ್ಕಳ ವ್ಯಾಪಾರ ಮೇಳದಲ್ಲಿ, ಮನೆಯಲ್ಲೇ ಮಾಡಿದ ತಿಂಡಿಗಳು,ಉಪ್ಪಿನಕಾಯಿ,ಸಂಡಿಗೆ, ಹಪ್ಪಳ, ಹಣ್ಣಿರಸ, ಐಸ್ ಕ್ರೀಮ್, ಮನೆಯಲ್ಲೇ ಬೆಳೆದ ತರಕಾರಿಗಳು, ಹಣ್ಣುಗಳು,ಮಕ್ಕಳೇ ತಯಾರಿಸಿದ ಸೌಂದರ್ಯ ಸಾಧನಗಳು, ಲೇಖನಿ ಸಾಮಗ್ರಿಗಳು ಹೀಗೆ ಹಲವಾರು ವಸ್ತುಗಳು, ಅದೃಷ್ಟದಾಟ ಎಲ್ಲರ ಗಮನ ಸೆಳೆದವು. ಸುಮಾರು 400ಕ್ಕಿಂತಲೂ ಅಧಿಕ ಗ್ರಾಹಕರು ತಮಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮಕ್ಕೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಸಂಸ್ಥೆಗಳು ಸಹಕರಿಸಿದವು.

ಶಾಲಾ ಪ್ರಾಂಶುಪಾಲರಾದ ಸಿಂಧು ವಿ.ಜಿ. ಸ್ವಾಗತಿಸಿ, ಶಾಲಾ ಶಿಕ್ಷಕಿ ವಿದ್ಯಾ ಎಚ್ ನಿರೂಪಿಸಿ, ಶಾಲಾ ಉಪಪ್ರಾಂಶುಪಾಲೆ ಶ್ರೀದೇವಿ ಕೆ. ಹೆಗ್ಡೆ ಧನ್ಯವಾದವಿತ್ತರು.

ಶಾಲಾ ಆಡಳಿತ ಮಂಡಳಿ,ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಹಾಗೂ ಪೋಷಕರ ಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮವು ಅದ್ಭುತ ಯಶಸ್ಸಿನೊಂದಿಗೆ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here