ಅಣ್ಣು ತಿಂಗಳಾಡಿ ಕಂಠಸಿರಿಯಲ್ಲಿ ‘ಕೆಯ್ಯೂರು ಶ್ರೀ ದುರ್ಗಾಂಬಿಕೆ’ ಕನ್ನಡ ಭಕ್ತಿಗೀತೆ : ಬಿಡುಗಡೆ

0

ಪುತ್ತೂರು: ಮೋಹನ್ ರೈ ಓಲೆಮುಂಡೋವು ಅವರ ನಿರ್ಮಾಣ ಮತ್ತು ಎಕೆ ಜಯರಾಮ ರೈ, ಎಸ್ ಬಿ ಜಯರಾಮ ರೈ ಹಾಗೂ ಮನಮೋಹನ ಕಣಿಯಾರು ಇವರ ಸಹಕಾರದಲ್ಲಿ, ಅಣ್ಣು ತಿಂಗಳಾಡಿ ಅವರ ಸಾಹಿತ್ಯ ನಿರ್ದೇಶನ ಮತ್ತು ಕಂಠಸಿರಿಯಲ್ಲಿ ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಕೆಯ್ಯೂರು ಕುರಿತ ‘ಕೆಯ್ಯೂರು ಶ್ರೀ ದುರ್ಗಾಂಬಿಕೆ’ ಕನ್ನಡ ಭಕ್ತಿಗೀತೆ ಶುಕ್ರವಾರ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಎಕೆ ಜಯರಾಮ ರೈ, ಪಂಚಾಯತ್ ಅಧ್ಯಕ್ಷರಾದ ಶರತ್ ಕುಮಾರ್ ಮಾಡಾವು ಮತ್ತು ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕರಾದ ಎಸ್ ಬಿ ಜಯರಾಮ ರೈ ಬಳಜ್ಜ ಇವರು ಸಾಂಕೇತಿಕವಾಗಿ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಅರ್ಚಕರಾದ ಶ್ರೀನಿವಾಸ ರಾವ್, ಮಧುಸೂಧನ್ ಭಟ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಚಂದ್ರಶೇಖರ್ ಪೂಜಾರಿ ಕಣಿಯಾರು, ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾದ ವಿಶ್ವನಾಥ ಶೆಟ್ಟಿ ಸಾಗು, ಕೆಪಿಸ್ ಕೆಯ್ಯೂರು ಶಾಲೆಯ ಉಪಪ್ರಾಂಶುಪಾಲರಾದ ವಿನೋದ್ ಕುಮಾರ್ ಕೆಎಸ್, ಪಂಚಾಯತ್ ಸದಸ್ಯರಾದ ಮೀನಾಕ್ಷಿ ವಿ ರೈ, ಪ್ರಮೀತ್ ರಾಜ್ ಕಟ್ಟತ್ತಾರು, ದೇವಣ್ಣ ನಾಯ್ಕ, ಕೃಷ್ಣ ಸಾಮಾನಿ, ಶಿವಪ್ಪ, ವಿಠಲ ಟೈಲರ್ ಸನಂಗಲ, ಕ್ಷೇತ್ರದ ಸಿಬ್ಬಂದಿ ಜಯಕಾಂತ್ ಕುಲಾಲ್ ಹಾಗೂ ಇತರ ಭಕ್ತಾದಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.

ಭಕ್ತಿಗೀತೆಯ ಕರ್ತೃ ಅಣ್ಣು ತಿಂಗಳಾಡಿ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಈ ಭಕ್ತಿಗೀತೆಗೆ ವಿಡಿಯೋ ಚಿತ್ರೀಕರಣ ಮಾಡಿದವರು. ಖ್ಯಾತ ಸಿನಿಮಾ ಛಾಯಾಗ್ರಾಹಕ ಅರುಣ್ ರೈ ಪುತ್ತೂರು ಮತ್ತು ಯತೀಶ್ ಪರ್ಪುಂಜ, ಸಂಗೀತ ಮತ್ತು ಮಿಕ್ಸಿಂಗ್ ಮಾಡಿದವರು. ಅಶ್ವಿನ್ ಬಾಬಣ್ಣ ಹಾಗೂ ಸಂಕಲನ ರೋಶನ್ ಕಡಬ, ‘ಕೆಯ್ಯೂರು ಶ್ರೀ ದುರ್ಗಾಂಬಿಕೆ’ ಭಕ್ತಿಗೀತೆ Pramith Raj Creations ಯೂಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿದೆ.

LEAVE A REPLY

Please enter your comment!
Please enter your name here