







ಅಧ್ಯಕ್ಷ: ಮುಹಮ್ಮದ್ ನವವಿ, ಪ್ರ.ಕಾರ್ಯದರ್ಶಿ: ಯೂಸುಫ್ ಎಂ, ಕೋಶಾಧಿಕಾರಿ: ಅಶ್ರಫ್ ಪಟ್ಟೆ


ಪುತ್ತೂರು: ಬಡಗನ್ನೂರು ಗ್ರಾಮದ ಮುಂಡೋಲೆ ಬದ್ರಿಯಾ ಜುಮಾ ಮಸ್ಜಿದ್ ಹಾಗೂ ದಾರುಸ್ಸಲಾಮ್ ಮದ್ರಸ ಕಮಿಟಿ ಇದರ 2026-29 ಸಾಲಿನ ಆಡಳಿತ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.



ವಕ್ಫ್ ಸಮಿತಿಯ ನಿರ್ದೇಶಾನುಸಾರ ಮುಂಡೋಳೆ ದಾರುಸ್ಸಲಾಂ ಮದ್ರಸ ವಠಾರದಲ್ಲಿ ಅಶ್ರಫ್ ಪಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಮುಹಮ್ಮದ್ ನವವಿ ಜಿ.ಎಂ, ಉಪಾಧ್ಯಕ್ಷರಾಗಿ ಸಿ.ಎಂ ಮುಹಮ್ಮದ್ ಹಾಜಿ ಮುಂಡೋಲೆ, ಅಬ್ದುಲ್ ರಹ್ಮಾನ್ ಹಾಜಿ ಮುಂಡೋಲೆ, ಪ್ರಧಾನ ಕಾರ್ಯದರ್ಶಿಯಾಗಿ ಯೂಸುಫ್ ಎಂ ಮುಂಡೋಳೆ, ಕೋಶಾಧಿಕಾರಿಯಾಗಿ ಅಶ್ರಫ್ ಪಟ್ಟೆ ಅವರನ್ನು ಆಯ್ಕೆ ಮಾಡಲಾಯಿತು.
ಜೊತೆ ಕಾರ್ಯದರ್ಶಿಗಳಾಗಿ ಮುಹಮ್ಮದ್ ಪಟ್ಟೆ, ಹಮೀದ್ ಎಂ.ಕೆ ಮುಂಡೋಲೆ, ಉಸ್ತುವಾರಿಗಳಾಗಿ ಅಬೂಬಕ್ಕರ್ ಕೆಮನಡ್ಕ, ಮುಹಮ್ಮದ್ ಹಾಜಿ ಒಮೆಗಾ, ಆದಂ ಹಾಜಿ ತುಳಸಿಯಡ್ಕ, ಅಬ್ಬಾಸ್ ಪೆರಿಗೇರಿ ಅವರನ್ನು ನೇಮಿಸಲಾಯಿತು. ಮುಹಮ್ಮದ್ ನವವಿ ಪ್ರಾರ್ಥನೆ ನಡೆಸಿದರು. ಕಾರ್ಯದರ್ಶಿ ಯೂಸುಫ್ ಮುಂಡೋಳೆ ಸ್ವಾಗತಿಸಿ ವಿಷಯ ಮಂಡಿಸಿದರು.










