






ಉಪ್ಪಿನಂಗಡಿ: ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯಲ್ಲಿ 77ನೇ ಗಣರಾಜ್ಯೋತ್ಸವ ಆಚರಿಸಲಾಯಿತು.


ಮಾಜಿ ಸೈನಿಕರಾದ ವಿಶ್ವನಾಥ ಗೌಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಅಭ್ಯಾಸಗಳನ್ನು ಮೈಗೂಡಿಸಿಕೊಂಡು ನ್ಯಾಯ, ನಿಷ್ಠೆ, ಸತ್ಯ, ಧರ್ಮಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ಅರಳಿಸಿಕೊಂಡಾಗ ದೇಶದ ಉತ್ತಮ ಸತ್ಪ್ರಜೆಗಳಾಗಿ ಬೆಳೆಯಲು ಸಾಧ್ಯವಿದೆ ಎಂದರು.



ಸಂಸ್ಥೆಯ ಪರಿವೀಕ್ಷಕ ಬಾಲಕೃಷ್ಣ ಗೌಡ ಬಿ.ಟಿ. ಅವರು ಸಂವಿಧಾನದ ಮಹತ್ವ, ನಾಗರಿಕರ ಕರ್ತವ್ಯಗಳು ಹಾಗೂ ಹುತಾತ್ಮರ ಸಾಧನೆಗಳ ಕುರಿತು ವಿವರಿಸಿ, ಭವ್ಯ ನಾಡಿನ ಸೇವೆಗೆ ವಿದ್ಯಾರ್ಥಿಗಳು ಸದಾ ಸಿದ್ಧರಾಗಿರಬೇಕು ಎಂದು ಕರೆ ನೀಡಿದರು. ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಶೀನಪ್ಪ ಗೌಡ ವಹಿಸಿದ್ದರು. ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.
ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಲಕ್ಷ್ಮಿ ಪಿ., ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಮೋಹನ ಗೌಡ ಹೆಚ್. ವಂದಿಸಿದರು. ಶಿಕ್ಷಕರಾದ ಶಕುಂತಲಾ ಕೆ., ಸವಿತಾ ಪಿ.ಸಿ., ಭವ್ಯ ವೈ., ನಿತ್ಯಾ ಬಿ., ಡೊಂಬಯ್ಯ ಗೌಡ ಹಾಗೂ ಇತರರು ಸಹಕರಿಸಿದರು.










