ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್‌ನ ವಾರ್ಷಿಕ ಮಹೋತ್ಸವ ಸಂಪನ್ನ

0

ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಏಕೈಕ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರವಾದ ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್‌ನಲ್ಲಿ 10 ದಿನಗಳ ಕಾಲ ಭಕ್ತಿಭಾವದಿಂದ ನಡೆದ ವಾರ್ಷಿಕ ಮಹೋತ್ಸವ ಜ.25ರಂದು ಸಂಪನ್ನಗೊಂಡಿತು.


ಜ.16ರಂದು ಆರಂಭಗೊಂಡ ಈ ಮಹೋತ್ಸವವು ಜ.25ರಂದು ಮುಕ್ತಾಯವಾಯಿತು. ಹಬ್ಬದ ಪ್ರಧಾನ ದಿನವಾದ ಜ.24ರಂದು ವಿಶೇಷ ಪ್ರಾರ್ಥನೆಗಳು, ಧಾರ್ಮಿಕ ವಿಧಿವಿಧಾನಗಳು ಮತ್ತು ಆಕರ್ಷಕ ಶೋಭಾಯಾತ್ರೆ ಮಹೋತ್ಸವದ ವೈಭವಕ್ಕೆ ಮತ್ತಷ್ಟು ಮೆರುಗು ನೀಡಿದವು. ಸಂಜೆ ಹಬ್ಬದ ಶೋಭಾಯಾತ್ರೆ ನೆಲ್ಯಾಡಿ ಪೇಟೆಯೊಳಗೆ ಭಕ್ತಿಗೀತಗಳೊಂದಿಗೆ ಸಾಗುತ್ತಾ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರಕ್ಕೆ ಆಗಮಿಸಿತು. ಶೋಭಾಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಸಂತ ಅಲ್ಫೋನ್ಸಮ್ಮನವರಿಗೆ ತಮ್ಮ ಹರಕೆಗಳನ್ನು ಅರ್ಪಿಸಿ, ಆಶೀರ್ವಾದ ಪಡೆದುಕೊಂಡರು. ಮಹೋತ್ಸವದ ವಿವಿಧ ದಿನಗಳಲ್ಲಿ ವಿಶೇಷ ನವೀನ ಪ್ರಾರ್ಥನೆಗಳು, ಧ್ಯಾನಗಳು, ಪವಿತ್ರ ಬಲಿ ಪೂಜೆಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಪುಣ್ಯ ಕ್ಷೇತ್ರದ ವಂದನಿಯ ಫಾ. ಶಾಜಿಮ್ಯಾಥ್ಯು, ಫಾ. ಅಲೆಕ್ಸ್ ಜೋನ್ಸನ್, ಟ್ರಸ್ಟಿಗಳಾದ ಜೋನ್ಸನ್, ರಾಜೇಶ್, ರೆಜಿ, ಜೋಯ್, ಕೋಶಾಧಿಕಾರಿ ಸುರೇಶ್, ಕಾರ್ಯದರ್ಶಿ ಜೆಸ್ಸಿ ಮೊದಲಾದವರು ನೇತೃತ್ವ ವಹಿಸಿದ್ದರು.

LEAVE A REPLY

Please enter your comment!
Please enter your name here