ಶರವೂರು ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆಯ 23ನೇ ಸೇವೆ

0

ಆಲಂಕಾರು: ಶ್ರೀ ದುರ್ಗಾಂಬಾ ಕಲಾಸಂಗಮ ಆಲಂಕಾರು ಇದರ ವತಿಯಿಂದ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ನಡೆಯುತ್ತಿರುವ ಯಕ್ಷಗಾನ ತಾಳಮದ್ದಳೆಯ 23ನೇ ಸೇವೆಯಾಗಿ’ ಕದಂಬ ಕೌಶಿಕೆ’ ಯಕ್ಷಗಾನ ತಾಳಮದ್ದಳೆ ಜ.24ರಂದು ಸಂಜೆ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.


ದೇವಸ್ಥಾನದ ಪ್ರಧಾನ ಅರ್ಚಕ ಹರಿಪ್ರಸಾದ್ ಉಪಾಧ್ಯಾಯ, ತಾರಾನಾಥ ರೈ ನಗ್ರಿ ಮತ್ತು ಕರಿಯ ಮುಗೇರ ಕೇಪುಳು ದೀಪೋಜ್ವಲನೆ ಮಾಡಿದರು. ದುರ್ಗಾಂಬಾ ಕಲಾ ಸಂಗಮದ ಕಲಾವಿದ ಬಾಲಕೃಷ್ಣ ಕೇಪುಳು ಅವರು, ತಮ್ಮ ಹುಟ್ಟು ಹಬ್ಬವನ್ನು ಕಳೆದ ಹಲವು ವರ್ಷಗಳಿಂದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತಾಳಮದ್ದಳೆ ಸೇವೆ ಮೂಲಕ ಆಚರಿಸುತ್ತಾ ಎಲ್ಲರಿಗೂ ಮಾದರಿಯಾಗಿದ್ದು ಅವರ ಸೇವೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲಾಯಿತು. ಸಂಜೀವ ಪಾರೆಂಕಿ ಶುಭ ಹಾರೈಸಿದರು.

ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ಡಿ.ಕೆ.ಆಚಾರ್ಯ ಹಳೆನೇರೆಂಕಿ, ಸುಧಾಂಶು ಕಲ್ಲಡ್ಕ, ಚೆಂಡೆ ಮದ್ದಳೆಯಲ್ಲಿ ಅಚ್ಯುತ ಪಾಂಗಣ್ಣಾಯ, ಹರಿ ನಗ್ರಿ, ಚಕ್ರತಾಳದಲ್ಲಿ ರಾಮ್‌ಪ್ರಕಾಶ್ ಕೊಡಂಗೆ, ಮುಮ್ಮೇಳದಲ್ಲಿ ರಶ್ಮಿತಾ ಸುರೇಶ್ ಜೋಗಿಬೆಟ್ಟು ಕಡೇಶಿವಾಲಯ (ದೇವೇಂದ್ರ), ಎಂ. ಕೃಷ್ಣಪ್ಪ ಕನ್ಯಾಡಿ, ಗುರುಪ್ರಸಾದ್ ಆಲಂಕಾರು (ಶುಂಭ ), ದಿವಾಕರ ಆಚಾರ್ಯ ಹಳೆನೇರೆಂಕಿ (ದೇವಿ), ಬಾಲಕೃಷ್ಣ ಕೇಪುಳು (ಚಂಡ), ಶಂಕರ್ ನೆಲ್ಯಾಡಿ (ಮುಂಡ), ಸಂಜೀವ ಪಾರೆಂಕಿ ಮಡಂತ್ಯಾರು (ಸುಗ್ರೀವ), ರಾಮ್‌ಪ್ರಸಾದ್ ಆಲಂಕಾರು (ರಕ್ತಬೀಜ) ಸಹಕರಿಸಿದರು. ಸೇವಾರ್ಥಿಗಳಾದ ಶ್ರದ್ಧಾ ಶರವೂರು ಬೆಂಗಳೂರು, ಬಾಲಕೃಷ್ಣ ಮತ್ತು ಮನೆಯವರು ಕೇಪುಳು, ಸಂಜೀವ ಅನುಗ್ರಹ ನಿಲಯ ಪಾರೆಂಕಿ, ಮಡಂತ್ಯಾರು ಅವರಿಗೆ ದೇವಸ್ಥಾನದ ವತಿಯಿಂದ ಸೇವಾ ಪ್ರಸಾದವನ್ನು ನೀಡಲಾಯಿತು. ರಶ್ಮಿತಾ ಸುರೇಶ್ ಜೋಗಿಬೆಟ್ಟು ಸ್ವಾಗತಿಸಿ, ಬಾಲಕೃಷ್ಣ ಕೇಪುಳು ವಂದಿಸಿದರು. ಕಲಾಭಿಮಾನಿಗಳು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here