ಸುಳ್ಯಪದವು : ಭಗವದ್ಗೀತೆ ಪುಸ್ತಕ, ಪೆನ್ ಮತ್ತು ನೋಟ್ ಬುಕ್ ವಿತರಣೆ

0

ಸುಳ್ಯಪದವು :ಇಲ್ಲಿನ ಧರ್ಮ ಶಿಕ್ಷಣ ಗ್ರಾಮ ಸಮಿತಿಯ ನೇತೃತ್ವದಲ್ಲಿ ಧರ್ಮ ಶಿಕ್ಷಣ ಪಡೆಯುವ ಮಕ್ಕಳಿಗೆ ಭಗವದ್ಗೀತೆ ಪುಸ್ತಕ, ಪೆನ್ ಮತ್ತು ನೋಟ್ ಬುಕ್ ವಿತರಣಾ ಕಾರ್ಯಕ್ರಮ ಜ. 18 ರಂದು ಶಬರಿನಗರ ಕೊರಗಜ್ಜ ಕ್ಷೇತ್ರದಲ್ಲಿ ನಡೆಯಿತು.

ಬೆಂಗಳೂರು ನಿವೃತ್ತ ಪೊಲೀಸ್ ಸೂಪರಿಂಟೆಂಡೆಂಟ್ ಭಾಸ್ಕರ್ ವಿ. ಬಿ., ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಧರ್ಮದ ಬಗ್ಗೆ ಜನರಲ್ಲಿ ನಿರಾಸಕ್ತಿ ಇದೆ. ಮೊಬೈಲ್, ಟಿವಿ, ಸಾಮಾಜಿಕ ಜಾಲತಾಣದಿಂದ ದೂರ ಇರಲು ಇಂದಿನ ಮಕ್ಕಳಿಗೆ ಧರ್ಮ ಶಿಕ್ಷಣ ನೀಡುವ ಅಗತ್ಯತೆ ಇದೆ. ಗ್ರಾಮ ಸಮಿತಿ ಉತ್ತಮ ಕಾರ್ಯ ಮಾಡುತ್ತಿದೆ. ಶೃಂಗೇರಿ ಶ್ರೀಗಳು ಹಿಂದೂ ಧರ್ಮಕ್ಕೆ ಅನೇಕ ಕೊಡುಗೆಯನ್ನು ನೀಡಿದ್ದಾರೆ. ಶಿಕ್ಷಕಿ ಯವರ ಸೇವೆಗೆ ಅಭಿನಂದನೆಗಳು ಎಂದು ಹೇಳಿದರು.   

ಧರ್ಮ ಶಿಕ್ಷಣ ಗ್ರಾಮ ಸಮಿತಿಯ ಸಂಚಾಲಕ ರಾಜೇಶ್ ಮರದ ಮೂಲೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 18 ವಾರಗಳಿಂದ ನಿರಂತರವಾಗಿ ಮಕ್ಕಳಲ್ಲಿ ಧರ್ಮ ಶಿಕ್ಷಣ ಕಾರ್ಯಕ್ರಮ ನಡೆಯುತ್ತಿದೆ.ಎಲ್ಲರ ಸಹಕಾರದಿಂದ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.

 ಸಚಿನ್ ಚಿತ್ರಕೂಟ ಪದಡ್ಕ ಮಾತನಾಡಿ ಆಚರಣೆ, ಆಚಾರ ವಿಚಾರಗಳು, ಸಂಪ್ರದಾಯಗಳು ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಇಂಥ ಕಾರ್ಯಕ್ರಮಗಳು ಹಳೆ ರೀತಿ ರಿವಾಜುಗಳು ಉಳಿಸಿ, ಸಮಾಜದ ಉನ್ನತಿಗೆ ಕಾರಣವಾಗುತ್ತದೆ ಎಂದು ಹೇಳಿದರು. 

ಸರ್ವೋದಯ ವಿದ್ಯಾ ಸಂಸ್ಥೆಗಳ ಶಿಕ್ಷಕ ಕರುಣಾಕರ ಶಬರಿನಗರ ಮಾತನಾಡಿ, ಪ್ರತಿ ನಿತ್ಯ ದಿನಚರಿಯಲ್ಲಿ ಶ್ಲೋಕಗಳು, ಭಜನೆಗಳು, ಭಗವದ್ಗೀತೆ ಹೇಳುವ ಅಭ್ಯಾಸಗಳನ್ನು ಮಕ್ಕಳು ಸಹಿತ ಎಲ್ಲರೂ ರೂಢಿಸಿಕೊಂಡಾಗ ಧನಾತ್ಮಕ ಉತ್ತಮ ಯೋಚನೆಗಳು ಬರುತ್ತದೆ ಎಂದು ಹೇಳಿದರು.

ಶಬರಿನಗರ ಕೊರಗಜ್ಜ ಸೇವಾ ಸಮಿತಿಯ ಕೋಶಾಧಿಕಾರಿ ಭಾಸ್ಕರ ಹೆಗ್ಡೆ ಮಾತನಾಡಿ, ಕ್ಷೇತ್ರದಲ್ಲಿ ನಡೆಯುವ ಇಂಥ ಕಾರ್ಯಕ್ರಮಗಳಿಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲು ಬದ್ಧ ಎಂದು ಹೇಳಿ ಶುಭ ಹಾರೈಸಿದರು. 

ಪುಸ್ತಕ ಕೊಡುಗೆ 
ಸುಳ್ಯಪದವು ಬಾಲಸುಬ್ರಾಹ್ಮಣ್ಯ ಅನುದಾನಿತ ಹಿ. ಪ್ರಾ. ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಜಿ ಪಿ ವೆಂಕಟ್ ರಾವ್  ರವರ ಶತಚಂದ್ರದರ್ಶನ ಕಾರ್ಯಕ್ರಮದ ನೆನಪಿನ ಸಲುವಾಗಿ  ಸುಳ್ಯಪದವು ಧರ್ಮ ಶಿಕ್ಷಣ ಪಡೆಯುವ ಮಕ್ಕಳಿಗೆ  20 ಭಗವದ್ಗೀತೆ ಪುಸ್ತಕ ಕೊಡುಗೆಯಾಗಿ ನೀಡಿದರು.

40 ಮಕ್ಕಳಿಗೆ ಭಗವದ್ಗೀತೆ ಪುಸ್ತಕ, ಪೆನ್ ಮತ್ತು ನೋಟ್ ಬುಕ್ ವಿತರಣೆ:-
40 ವಿದ್ಯಾರ್ಥಿಗಳಿಗೆ ಭಗವದ್ಗೀತೆ ಪುಸ್ತಕ, ಪೆನ್ ಮತ್ತು ನೋಟ್ ಬುಕ್ ವಿತರಿಸಲಾಯಿತು.ದಾನಿ ಶೇಷಪ್ಪ ನಾಯ್ಕ ಪದಡ್ಕ ಇವರನ್ನು ಗೌರವಿಸಲಾಯಿತು.ಶಿಕ್ಷಕಿಯರಾದ  ಭವ್ಯ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು.ಜ್ಯೋತಿ ವಂದಿಸಿದರು.ರಾಜಶ್ರೀ  ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here