







ಪುತ್ತೂರು: ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾಯಿ ಇಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣವನ್ನು ಶಾಲಾ SDMC ಅಧ್ಯಕ್ಷರು ರವಿ ನೆರವೇರಿಸಿದರು. ನಂತರ ಶಾಲಾಮಕ್ಕಳಿಂದ ಸಾಮೂಹಿಕ ಕವಾಯತು ಏರೋಬಿಕ್ಸ್ ನೃತ್ಯ ಆಟದ ಮೈದಾನದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ರಾಮಕೃಷ್ಣ ಮಾಲಕರು ಆಶೀರ್ವಾದ ಶಾಮಿಯಾನ ದೀಪಪ್ರಜ್ವಲನೆ ನಡೆಸಿದರು.



ಮುಖ್ಯಗುರುಗಳಾದ ಮರಿಯಮ್ಮ ಪಿ.ಎಸ್ ಸ್ವಾಗತಿಸಿದರು. ಪಠ್ಯ, ಪಠ್ಯೇತರ ಮತ್ತು ಕ್ರೀಡೆಗಳಲ್ಲಿ ಪ್ರತಿಭಾನ್ವಿತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮಾಜಿ ನಗರ ಸಭಾ ಅಧ್ಯಕ್ಷರು ಸರ್ವರಿಗೂ ಸಿಹಿ ತಿಂಡಿಯನ್ನು ನೀಡಿ ಸಹಕರಿಸಿದರು. ವಿಲ್ಫೈಡ್ ಡಿಸೋಜ ಓರಿಯಂಟಲ್ ಕಾಶ್ಯೂ ಇಂಡಸ್ಟ್ರೀಸ್ ಕೃಷ್ಣನಗರ ಕೆಮ್ಮಾಯಿ ಇವರು ಬಹುಮಾನದ ಪ್ರಾಯೋಜಕತ್ವವನ್ನು ವಹಿಸಿ ಸಹಕರಿಸಿದರು. ವಿನಾಯಕರೊಟ್ಟಿ ಇಂಡಸ್ಟ್ರೀಸ್ ಕೆಮ್ಮಾಯಿ ಇದರಮಾಲೀಕರಾದ ಗುರುಪ್ರಸಾದ್ ಇವರು ಮಧ್ಯಾಹ್ನದ ಊಟದ ವ್ಯವಸ್ಥೆಗೆಸಹಕಾರ ನೀಡಿದರು. ನಗರಸಭಾ ನಿಕಟಪೂರ್ವ ಅಧ್ಯಕ್ಷರಾದ ಲೀಲಾವತಿಯವರು ವಕೀಲರಾದ ಶ್ರೀಮತಿ ಹರಿಣಾಕ್ಷಿ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷರಾದ ಉದಯ ಆಚಾರ್ಯರು ಶಾಲಾ SDMC ಉಪಾಧ್ಯಕ್ಷೆಯಾದ ರಹಮತ್ ಮತ್ತು ಸದಸ್ಯರು ಪೋಷಕರು ಊರ ವಿದ್ಯಾಭಿಮಾನಿಗಳು ಶಾಲಾ ಮಕ್ಕಳು ಹಾಜರಿದ್ದರು.



ಶಿಕ್ಷಕಿಯರಾದ ಕುಸುಮಾವತಿ ಮತ್ತು ಶ್ರುತಿ ಇವರು ಕಾರ್ಯಕ್ರಮ ನಿರೂಪಿಸಿದರು. ನಾಗವೇಣಿ, ಯಶಸ್ವಿನಿ ಇವರು ಬಹುಮಾನಿತರ ಪಟ್ಟಿಯನ್ನು ವಾಚಿಸಿದರು. ಶೇಷಮ್ಮ ಇವರು ಸರ್ವರನ್ನು ವಂದಿಸಿದರು. ಗಾಯತ್ರಿ ಚೇತನ ಮತ್ತು ದಿವ್ಯ ಇವರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.










