ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

0

ಪುತ್ತೂರು : ನಮ್ಮ ದೇಶದಲ್ಲಿ ಸಂವಿಧಾನವು ಜಾರಿಗೆ ಬಂದು ಗಣರಾಜ್ಯವಾದ ಸವಿನೆನಪಿಗಾಗಿ ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿಯಾದ ಸುರೇಶ್ ಕೆ.ಯು ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಧ್ವಜರೋಹಣವನ್ನು ನೆರವೇರಿಸಿ ಮಾತನಾಡುತ್ತಾ; ಭಾರತೀಯ ರಕ್ಷಣಾ ಸೇವೆ ಮತ್ತು ಸಶಸ್ತ್ರ ಪಡೆಯ ವ್ಯತ್ಯಾಸ, ಇದಕ್ಕೆ ಸೇರಲು ಅಗತ್ಯವಿರುವ ಅರ್ಹತೆ, ಅವಕಾಶ ಇತ್ಯಾದಿಗಳ ಕುರಿತು ವಿವರಗಳನ್ನು ನೀಡಿ, ಭಾರತೀಯ ಸೇನೆಗೆ ಸೇರುವಂತೆ ಮಕ್ಕಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ವಸಂತಿ ಕೆ. ಇವರು, ಹಿರಿಯರು ಕಟ್ಟಿದ ದೇಶವನ್ನು ಮುನ್ನಡೆಸುವ ಮಹತ್ತರವಾದ ಜವಾಬ್ದಾರಿ ನಮ್ಮದಾಗಿದೆ ಎಂದು ಹೇಳಿ, ದೇಶ ಸೇವೆಗೆ ಬದ್ಧರಾಗಿ ಎಂದು ಮಕ್ಕಳಿಗೆ ಕರೆ ನೀಡಿದರು.

8ನೇ ತರಗತಿಯ ವಿದ್ಯಾರ್ಥಿನಿಯರಾದ ಆದ್ಯ ಐ.ಆರ್ ಸ್ವಾಗತಿಸಿ, ಮಾನ್ವಿ ಕಜೆ ನಿರೂಪಿಸಿ, ಸಾನ್ವಿಕ ಧನ್ಯವಾದವಿತ್ತರು. ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸಿಂಧು ವಿ.ಜಿ, ಉಪಪ್ರಾಂಶುಪಾಲೆ ಶ್ರೀದೇವಿ ಕೆ. ಹೆಗ್ಡೆ, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here