







ಪುತ್ತೂರು: ಕಳೆದ 21 ವರ್ಷಗಳಿಂದ ಕಲೋಪಾಸನ ಸಾಂಸ್ಕೃತಿಕ ಕಾರ್ಯಕ್ರಮಗಳು ಎಸ್ ಡಿ ಪಿ ರೆಮಿಡೀಸ್ ಅಂಡ್ ರಿಸರ್ಚ್ ಸೆಂಟರ್ ಇದರ ಪ್ರಾಯೋಜಕತ್ವದಲ್ಲಿ ಪುತ್ತೂರಿನಲ್ಲಿ ನಡೆಯುತ್ತಿದೆ. 22ನೇ ವರ್ಷದ ಕಲೋಪಾಸನಾ ಜ.31 ಹಾಗೂ ಫೆ.1 ಮತ್ತು 2 ರಂದು ಪುತ್ತೂರಿನ ಎಸ್ ಡಿ ಪಿ ರೆಮಿಡೀಸ್ ಅಂಡ್ ರಿಸರ್ಚ್ ಸೆಂಟರ್ ನ ಆವರಣದಲ್ಲಿ ನಡೆಯಲಿದೆ.


ಜ.31ರಂದು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಎಡನೀರು ಮಠ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಿರುವರು. ನಂತರ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಚೆನ್ನೈನ ವಿದುಷಿಗಳಾದ ಅನಾಹಿತ – ಅಪೂರ್ವ ನಡೆಸಿಕೊಡಲಿದ್ದಾಈ. ಇವರಿಗೆ ವಯಲಿನ್ ನಲ್ಲಿ ವಿದ್ವಾನ್ ರಾಮಕೃಷ್ಣನ್ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ದಿಲ್ಲಿ ಸಾಯಿ ರಾಮ್, ಘಟಂನಲ್ಲಿ ವಿದ್ವಾನ್ ಜಿಎಸ್ ರಾಮಾನುಜಮ್ ಸಹಕರಿಸಲಿದ್ದಾರೆ. ಫೆ.1 ಭರತನಾಟ್ಯ ಮಲಯಾಳಂ ಖ್ಯಾತ ಚಿತ್ರನಟಿ ನವ್ಯನಾಯರ್ ಅವರು ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ. ಫೆಬ್ರವರಿ 2ರಂದು ಯಕ್ಷಗಾನ ಶ್ರೀ ಹನುಮಗಿರಿ ಮೇಳ ಇವರಿಂದ ವರ್ಣ ಪಲ್ಲಟ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮಗಳಿಗೆ ಪ್ರವೇಶ ಉಚಿತ ದೇಶದ ಶ್ರೇಷ್ಠ ಕಲಾವಿದರ ಸಾಂಸ್ಕೃತಿಕ ಕಲಾ ಸಂಭ್ರಮದಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಎಸ್ ಡಿ ಪಿ ರೆಮಿಡೀಸ್ ಅಂಡ್ ರಿಸರ್ವ್ ಸೆಂಟರ್ ಇದರ ನಿರ್ದೇಶಕರಾದ ಡಾ. ಹರಿಕೃಷ್ಣ ಪಾಣಾಜೆ ಹಾಗೂ ರೂಪಲೇಖ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













