






ಪುತ್ತೂರು: ಬಂಟರ ಸಂಘ ಪುತ್ತೂರು ತಾಲ್ಲೂಕು ( ರಿ ) ಇದರ ಮಹಿಳಾ ವಿಭಾಗದ ಮಾಸಿಕ ಸಭೆಯು ಜನವರಿ 26 ರಂದು ಪುತ್ತೂರು ಸುಂದರಾಂ ಶೆಟ್ಟಿ ಸ್ಮಾರಕ ಬಂಟರ ಭವನ ಕೊಂಬೆಟ್ಟು ಪುತ್ತೂರು ಇಲ್ಲಿ ನಡೆಯಿತು.


ಮಹಿಳಾ ಬಂಟರ ವಿಭಾಗದ ಅಧ್ಯಕ್ಷರಾದ ಗೀತಾ ಮೋಹನ ರೈ ನರಿಮೊಗರು ಅಧ್ಯಕ್ಷತೆ ವಹಿಸಿದ್ದರು. ಬಂಟರ ಸಂಘ ಪುತ್ತೂರು ತಾಲ್ಲೂಕುಇದರ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಮಹಿಳಾ ವಿಭಾಗದ ಕೋಶಾಧಿಕಾರಿ ಅರುಣಾ ಡಿ ರೈ, ಅಹ್ವಾನಿತರಾದ ಅನಿತಾ ಹೇಮನಾಥ ಶೆಟ್ಟಿ ” ಮಹಿಳೆ ಮತ್ತು ಕೃಷಿ ” ಈ ಬಗ್ಗೆ ಮಾಹಿತಿ ನೀಡಿದ ಅನುರಾಧ ಆರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.




“ಮಹಿಳೆ ಮತ್ತು ಕೃಷಿ ” ಈ ವಿಷಯದ ಬಗ್ಗೆ ಶ್ರೀಮತಿ ಅನುರಾಧ ಆರ್ ಶೆಟ್ಟಿ ಮಹಿಳೆಯರಿಗೆ ಮಾಹಿತಿ ನೀಡಿದರು. ಕೃಷಿಯಲ್ಲಿ ಆಸಕ್ತಿ ಇರುವ ಸ್ವಾಭಿಮಾನಿ ಬಂಟ ಮಹಿಳೆಯರು ಜೀವನದಲ್ಲಿ ಯಾವತ್ತೂ ಸೋಲು ಕಾಣಲು ಸಾಧ್ಯವಿಲ್ಲ ಎಂದರು. ಹೇಮನಾಥ ಶೆಟ್ಟಿ ಕಾವು ಮಾತಾಡಿ ಪುತ್ತೂರು ಬಂಟರ ಸಂಘಕ್ಕೆ ಐದುವರೆ ಎಕ್ರೆ ಜಾಗ ಈಗಾಗಲೇ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಇವರ ಸತತ ಪ್ರಯತ್ನದಿಂದ ಮಂಜೂರಾದ ಬಗ್ಗೆ ಹಾಗೂ ಮುಂದಿನ ಯೋಜನೆ.. ಯೋಚನೆಗಳ ಬಗ್ಗೆ ಸಭೆಯ ಮುಂದಿಟ್ಟರು. ಅಧ್ಯಕ್ಷರಾದ ಗೀತಾ ಮೋಹನ ರೈ ಇವರು 2026 ನೇ ಮಾರ್ಚ್ ತಿಂಗಳಲ್ಲಿ ನಡೆಯಲಿರುವ “ಮಹಿಳಾ ದಿನಾಚರಣೆ” ಬಗ್ಗೆ ಎಲ್ಲರ ಸಲಹೆ ಸಹಕಾರ ಕೋರಿದರು.
ಬಂಟರ ಸಂಘದ ಕೋಶಾಧಿಕಾರಿ ಸಂತೋಷ್ ಶೆಟ್ಟಿ ಸಾಜ, ರವಿ ಪ್ರಸಾದ್ ಶೆಟ್ಟಿ, ಕ್ರೀಡಾ ಸಂಚಾಲಕ ದಯಾನಂದ ರೈ ಕೊರ್ಮಂಡ, ಯುವ ವಿಭಾಗದ ಕಾರ್ಯದರ್ಶಿ ರಂಜಿನಿ ಶೆಟ್ಟಿ, ಮನ್ಮಥ ಶೆಟ್ಟಿ ಮಹಿಳಾ ವಿಭಾಗದ ಗೌರವ ಸಲಹೆ ಗಾರರು, ಕ್ರೀಡಾ ಸಂಚಾಲಕರು, ಉಪಾಧ್ಯಕ್ಷರು, ಜತೆ ಕಾರ್ಯದರ್ಶಿ ಗಳು, ನಿರ್ದೇಶಕರು, ಖಾಯಂ ಸದಸ್ಯರು ಉಪಸ್ಥಿತರಿದ್ದರು. ವಸಂತಿ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಕುಸುಮ ಪಿ ಶೆಟ್ಟಿ ಸ್ವಾಗತಿಸಿ. ಕಾರ್ಯಕ್ರಮ ನಿರೂಪಿಸಿದರು. ಅರುಣಾ ದಿನಕರ ರೈ ವಂದಿಸಿದರು.










