ಉಪ್ಪಿನಂಗಡಿ: ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ: ಅವಭೃತೋತ್ಸವದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನ

0

ಉಪ್ಪಿನಂಗಡಿ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜಕ್ಕೆ ಒಳಪಟ್ಟ ಇಲ್ಲಿನ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಜ.28ರಂದು ಅವಭೃತೋತ್ಸವ ನಡೆಯಿತು.


ಬೆಳಗ್ಗೆ ದೇವಾಲಯದಲ್ಲಿ ಅವಭೃತ ಅಭಿಷೇಕ ನಡೆದು ಅವಭೃತೋತ್ಸವ ಮೆರವಣಿಗೆಯು ದೇವಾಲಯದಿಂದ ರಥಬೀದಿಯಾಗಿ ಬ್ಯಾಂಕ್ ರಸ್ತೆ ಮೂಲಕ ಗಾಂಧಿಪಾರ್ಕ್‌ಗೆ ತೆರಳಿ ಬಳಿಕ ಶಾಲಾ ರಸ್ತೆಯ ಮೂಲಕ ಹಿಂದುರಿಗಿತು. ಬಳಿಕ ದೇವಾಲಯದಲ್ಲಿ ಭಕ್ತರಿಂದ ಉರುಳು ಸೇವೆ, ಧ್ವಜ ಅವರೋಹಣ, ಯಜ್ಞ ಮಂಟಪ ವಿಸರ್ಜನೆ ನಡೆಯಿತು. ಸಂಜೆ ಮಹಾಪೂಜೆ ನಡೆದು ರಾತ್ರಿ ಸಮಾರಾಧನೆ, ರಾತ್ರಿ ಪೂಜೆಯಾಗಿ ರಾತ್ರಿ ಉತ್ಸವ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಜ.೨೩ರ ಧ್ವಜಾರೋಹಣದೊಂದಿಗೆ ಆರಂಭಗೊಂಡ ಜಾತ್ರಾ ಮಹೋತ್ಸವವು ಈ ಎಲ್ಲಾ ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ಸಂಪನ್ನಗೊಂಡಿತು. ನೂರಾರು ಭಕ್ತರು ಇದರಲ್ಲಿ ಪಾಲ್ಗೊಂಡರು. ದೇವಾಲಯದ ಜಾತ್ರೆಯ ಸಂದರ್ಭ ಸ್ವಯಂ ಸೇವಕರು ಸ್ವಚ್ಛತೆಗೆ ವಿಶೇಷ ಒತ್ತು ನೀಡಿ ನಗರ ಸೌಂದರ್ಯ ಕಾಪಾಡಿದರು.


ಈ ಸಂದರ್ಭ ದೇವಾಲಯದ ಆಡಳಿತ ಮೊಕ್ತೇಸರರಾದ ಬಿ. ಗಣೇಶ್ ಶೆಣೈ, ಮೊಕ್ತೇಸರರಾದ ಡಾ. ಎಂ. ರತ್ನಾಕರ ಶೆಣೈ, ಕೆ. ಅನಂತರಾಯ ಕಿಣಿ, ಯು. ನಾಗರಾಜ ಭಟ್, ಪಿ. ದೇವಿದಾಸ್ ಭಟ್ ಹಾಗೂ ಜಿಎಸ್‌ಬಿ ಸಮಾಜ ಬಾಂಧವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here